
ನವದೆಹಲಿ: ಜೀವ ವಿಮೆ ಕ್ಷೇತ್ರದ ದಿಗ್ಗಜ ಕಂಪನಿಯಾಗಿರುವ ಎಲ್ಐಸಿ ಸದ್ಯದಲ್ಲೇ ಆರೋಗ್ಯ ವಿಮೆ ಕ್ಷೇತ್ರವನ್ನು ಪ್ರವೇಶಿಸುವುದು ಖಚಿತವಾಗಿದೆ.
ಮುಂದಿನ ಎರಡು ವಾರಗಳಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಎಲ್ಐಸಿ ಪಾಲು ಖರೀದಿಸುವುದು ಖಚಿತವಾಗಿದ್ದು, ಈ ಕುರಿತು ಮಾತುಕತೆ ನಡೆದಿದೆ. ಮಾರ್ಚ್ 31ರೊಳಗೆ ಖಾಸಗಿ ಕಂಪನಿಯೊಂದಿಗಿನ ಒಪ್ಪಂದದ ಕುರಿತಾದ ಅಧಿಕೃತ ಘೋಷಣೆ ಹೊರಬೀಳಲಿದೆ.
ಎಲ್ಐಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ಧಾರ್ಥ್ ಮೊಹಾಂತಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಯಾವ ಕಂಪನಿಯಲ್ಲಿ ಪಾಲು ಖರೀದಿಸಲಾಗುವುದು ಎಂಬುದನ್ನು ಮೊಹಾಂತಿ ಬಹಿರಂಗಪಡಿಸಿಲ್ಲ. ಆದರೆ, ಮಣಿಪಾಲ್ ಸಿಗ್ನಾ ಕಂಪನಿಯಲ್ಲಿ ಎಲ್ಐಸಿ ಷೇರು ಖರೀದಿಸಲಿದೆ. ಇದಕ್ಕಾಗಿ 4000 ಕೋಟಿ ರೂ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಹೇಳಲಾಗಿದೆ.
ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮಗಳ ಅನ್ವಯ ಜೀವವಿಮೆ ಕಂಪನಿಯು ಆರೋಗ್ಯವಿಮೆ ಸೌಲಭ್ಯ ಕಲ್ಪಿಸಲ ಅವಕಾಶವಿಲ್ಲ. ಈ ಸೌಲಭ್ಯ ಕಲ್ಪಿಸಲು ಸಂಯೋಜಿತ ಪರವಾನಿಗೆ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ಎಲ್ಐಸಿ ಪ್ರಯತ್ನ ಕೈಗೊಂಡಿದೆ ಎನ್ನಲಾಗಿದೆ.