ಬೆಂಗಳೂರು : ಮಾ.22 ರಂದು ಅಖಂಡ ಕರ್ನಾಟಕ ಬಂದ್ ಫಿಕ್ಸ್ ಆಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಣೆ ಮಾಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ‘ ಯಾವುದೇ ಕಾರಣಕ್ಕೂ ಬಂದ್ ವಾಪಸ್ ಪಡೆಯಲ್ಲ, ಬಂದ್ ಮಾಡಿಯೇ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಘೋಷಣೆ ಮಾಡಿದ್ದಾರೆ.
ನೆರೆರಾಜ್ಯ, ಸಂಸತ್ ಗಮನ ಸೆಳೆಯಲು ಮಾ.22 ರಂದು ಕರ್ನಾಟಕ ಬಂದ್ ಮಾಡುತ್ತಿದ್ದೇವೆ, ಕರ್ನಾಟಕದಲ್ಲಿ ಕನ್ನಡಿಗರಿಗೆ ಹೊಡೆಯುತ್ತಿದ್ದಾರೆ . ಮಹಾರಾಷ್ಟ್ರದವರು ಕನ್ನಡಿಗರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರ ಹಲ್ಲೆ ಪ್ರಕರಣ ಖಂಡಿಸಿ ಕನ್ನಡಪರ ಸಂಘಟನೆಗಳು ಸಿಡಿದೆದ್ದಿದ್ದು, ಮಾ.22 ರಂದು ಅಖಂಡ ಕರ್ನಾಟಕ ಬಂದ್ ಹೋರಾಟಕ್ಕೆ ಕರೆ ನೀಡಲಾಗಿತ್ತು. ಬಂದ್ ಕುರಿತಾದ ಇಂದು ಸಭೆಯಲ್ಲಿ ಬಂದ್ ನಡೆಸಲು ತೀರ್ಮಾನಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಕನ್ನಡಿಗರು, ಕರ್ನಾಟಕದ ಬಸ್ ಮೇಲೆ ನಡೆದ ಪುಂಡಾಟಿಕೆ ಹಾಗೂ ಕಂಡಕ್ಟರ್ , ಚಾಲಕರ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದೆ. ಆಟೋ ಸಂಘಟನೆಗಳು, ಕ್ಯಾಬ್, ಹೋಟೆಲ್ ಮಾಲೀಕರು ಎಲ್ಲರೂ ಬ್ಂದ್ ಗೆ ಬೆಂಬಲ ನೀಡಬೇಕು ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.