
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ನಿವಾರಣೆಗಾಗಿ ಹಲವಾರು ತೈಲ, ಔಷಧಿಗಳ ಬಗ್ಗೆ ಜಾಹೀರಾತುಗಳು, ಪ್ರಚಾರಗಳನ್ನು ಕಾಣುತ್ತೇವೆ. ದಟ್ಟ ಕೂದಲು ಬರಲೆಂದು ಹಚ್ಚಿದ ಇಂತಹ ತೈಲ, ಔಷಧಿಗಳಿಂದ ಅಡ್ಡಪರಿಣಾಮ ಉಂಟಾಗಿ ಹಲವರು ಇರುವ ಕೂದಲನ್ನೂ ಕಳೆದುಕೊಂಡಿರುವುದೇ ಹೆಚ್ಚು. ಇಂತದ್ದೇ ಘಟನೆ ಪಂಜಾಬ್ ನಲ್ಲಿ ವರದಿಯಾಗಿದೆ. ಆದರೆ ಇಲ್ಲಿ ಕೂದಲಲ್ಲ, ಜನರು ಕಣ್ಣನ್ನೇ ಕಳೆದುಕೊಂಡಿದ್ದಾರೆ.
ಬೋಳು ತಲೆ ಸಮಸ್ಯೆ ನಿವಾರಣೆಗಾಗಿ ಒಂದು ಶಿಬಿರ ಆಯೋಜಿಸಲಾಗಿತ್ತು. ಸಂಗ್ರೂರಿನ ಕಾಳಿ ದೇವಿ ಮಂದಿಇರದಲ್ಲಿ ಆಯೋಜಿಇಸಿದ್ದ ಶಿಬಿರದಲ್ಲಿ ಸಾವಿರಾರು ಜನರು ಸೇರಿದ್ದರು. ಪವಾಡಭರಿತ ಔಷಧ ಕೂದಲು ಉದುರುವುದನ್ನು ನಿಲ್ಲಿಸಿ ದಟ್ಟವಾದ ಕೂದಲು ಬೆಳೆಯಲು ಸಹಕಾರಿಯಾಗಲಿದೆ ಎಂದು ಪ್ರಚಾರ ಮಾಡಲಾಗಿತ್ತು. ನೂರಾರು ಜನರು ಶಿಬಿರದಲ್ಲಿ ಕೊಟ್ಟ ಔಷಧಿ ತಲೆಗೆ ಹಚ್ಚಿದ್ದಾರೆ. ಔಷಧಿ ಹಚ್ಚಿದ ಬಳಿಕ 65ಕ್ಕೂ ಹೆಚ್ಚು ಜನರಿಗೆ ಕಣ್ಣು ಉರಿ ಶುರುವಾಗಿದೆ. ಹಲವರು ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ.
65ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಗ್ರೂರ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಾ.ಅಮನ್ ದೀಪ್ ಸಿಂಗ್ ಹಾಗೂ ತೇಜಿದರ್ ಪಾಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ.