alex Certify ʼಪುಷ್ಪ 2ʼ ಗಾಗಿ ಅಲ್ಲು ಅರ್ಜುನ್ ಡೆಡಿಕೇಷನ್ ; ಗಾಯವಾಗಿದ್ದರೂ ಜಾತ್ರೆ ಸಾಂಗ್‌ ಗೆ ಡಾನ್ಸ್‌ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪುಷ್ಪ 2ʼ ಗಾಗಿ ಅಲ್ಲು ಅರ್ಜುನ್ ಡೆಡಿಕೇಷನ್ ; ಗಾಯವಾಗಿದ್ದರೂ ಜಾತ್ರೆ ಸಾಂಗ್‌ ಗೆ ಡಾನ್ಸ್‌ !

ಅಲ್ಲು ಅರ್ಜುನ್ ಪುಷ್ಪ 2 ಗಾಗಿ ಸಖತ್ ಕಷ್ಟಪಟ್ಟಿದ್ದಾರೆ. ಅವರ ಪಾತ್ರಕ್ಕಾಗಿ ವಿಭಿನ್ನ ಉಚ್ಚಾರಣೆ, ಡಾನ್ಸ್, ಫೈಟ್ ಅಂತ ಸಖತ್ ತಯಾರಿ ನಡೆಸಿದ್ದಾರೆ. ಈ ಸಿನಿಮಾದಲ್ಲಿ ಅವರ ಡಾನ್ಸ್‌ಗಾಗಿ ಕಾಲು, ಕುತ್ತಿಗೆಗೆ ಗಾಯ ಮಾಡಿಕೊಂಡಿದ್ದಾರೆ. ಡಾನ್ಸ್ ಮಾಸ್ಟರ್ ಗಣೇಶ್ ಆಚಾರ್ಯ ಅವರು ಗಂಗೋ ರೇಣುಕಾ ತಾಯಿ ಹಾಡಿನ ಚಿತ್ರೀಕರಣದ ಸಮಯದಲ್ಲಿ ಅಲ್ಲು ಅರ್ಜುನ್ ಅವರ ಡೆಡಿಕೇಷನ್ ನೋಡಿ ಶಾಕ್ ಆಗಿದ್ದಾರೆ.

ಈ ಹಾಡಿನಲ್ಲಿ ಅಲ್ಲು ಅರ್ಜುನ್ ಸೀರೆ, ಮೇಕಪ್, ಭಾರೀ ಆಭರಣಗಳನ್ನು ಧರಿಸಿ ಗಂಗಮ್ಮ ತಾಯಿಗೆ ಗೌರವ ಸಲ್ಲಿಸಿದ್ದಾರೆ. ಈ ಜಾತ್ರೆ ಹಾಡಿನ ಚಿತ್ರೀಕರಣ 29 ದಿನಗಳ ಕಾಲ ನಡೆದಿದೆ. ಪ್ರತಿ 5-10 ದಿನಗಳಿಗೊಮ್ಮೆ ಅಲ್ಲು ಅರ್ಜುನ್ ಗಾಯಗೊಳ್ಳುತ್ತಿದ್ದರು. ಕೆಲವೊಮ್ಮೆ ಅವರ ಕಾಲು ಅಥವಾ ಕುತ್ತಿಗೆಗೆ ಗಾಯಗಳಾಗುತ್ತಿದ್ದವು. ಆದರೂ, ಅವರು ಡಾನ್ಸ್ ಮಾಡುವುದನ್ನು ಮಾತ್ರ ಬಿಡಲಿಲ್ಲ.

ಅಲ್ಲದೆ, ಅಲ್ಲು ಅರ್ಜುನ್ ಈ ಸಿನಿಮಾಗಾಗಿ 5 ವರ್ಷ ದುಡಿದಿದ್ದಾರೆ. ನೋವು, ಕಷ್ಟ ಆದ್ರೂ ಅವರು ಮಾತ್ರ ಸಿನಿಮಾಗಾಗಿ ತಮ್ಮ ಬೆಸ್ಟ್ ಕೊಡಲು ಪ್ರಯತ್ನಿಸಿದ್ದಾರೆ.

ಸುಕುಮಾರ್ ನಿರ್ದೇಶನದ ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗಪತಿ ಬಾಬು, ಸುನಿಲ್ ಮತ್ತು ರಾವ್ ರಮೇಶ್ ನಟಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...