ಬೆಂಗಳೂರು : ಎಸ್.ಎಸ್.ಎಲ್.ಸಿ.ಮುಖ್ಯ ಪರೀಕ್ಷೆಗೆ ಅನಧಿಕೃತವಾಗಿ ನೊಂದಾವಣೆಗೊಂಡ ವಿದ್ಯಾರ್ಥಿಗಳ ರದ್ದುಪಡಿಸಲಾಗಿದೆ.
2025ರ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯುವ ಎಸ್.ಎಸ್.ಎಲ್.ಸಿ.ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಅನಧಿಕೃತವಾಗಿ ನೊಂದಾಯಿಸಿರುವ ವಿದ್ಯಾರ್ಥಿಗಳನ್ನು ರದ್ದುಪಡಿಸಿರುವ ಕುರಿತು ಆದೇಶ ಹೊರಡಿಸಿದೆ.
ಮೇಲಿನ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಶಾಲಾ ಸಂಕೇತ NA 0142 ಶ್ರೀ ಶಿವಾನಂದ ಭಾರತಿ ಪ್ರೌಢಶಾಲೆ, ಖೇಮಲಾಪುರ, ರಾಯಭಾಗ ತಾ. ಚಿಕ್ಕೋಡಿ ಜಿಲ್ಲೆ ಈ ಶಾಲೆಗೆ ಸಂಬಂಧಿಸಿದಂತೆ 2025ರ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ. ಮುಖ್ಯಪರೀಕ್ಷೆಗೆ 31 ವಿದ್ಯಾರ್ಥಿಗಳು ಪುನರಾವರ್ತಿತ CCERF 06 ವಿದ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳು CCEPF 04 ಒಟ್ಟು 41 ವಿದ್ಯಾರ್ಥಿಗಳು ನೊಂದಣೆ ಮಾಡಿಕೊಂಡಿರುತ್ತಾರೆ. ಆದರೆ ಸದರಿ ಶಾಲೆಯಲ್ಲಿ 44 ವಿದ್ಯಾರ್ಥಿಗಳನ್ನು ಆನಧೀಕೃತವಾಗಿ ನೊಂದಣೆಯಾಗಿರುತ್ತದೆ. ಆದ ಕಾರಣ 41 ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಉಳಿದ 44 ವಿದ್ಯಾರ್ಥಿಗಳ ನೊಂದಣೆಯನ್ನು ರದ್ದುಪಡಿಸುವಂತೆ ಉಲ್ಲೇಖದನ್ವಯ ಕೋರಿ ಉಪನಿರ್ದೇಶಕರು (ಆಡಳಿತ), ಚಿಕ್ಕೋಡಿ ಜಿಲ್ಲೆ ಇವರು ದಿನಾಂಕ: 13.02.2025 (ಸ್ವೀಕೃತಿ ದಿ: 03.03.2025)ರಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಚಿಕ್ಕೋಡಿ, ಇವರ ಪತ್ರ ದಿನಾಂಕ; 13.02.2025 ಮತ್ತು ದಿನಾಂಕ: 04.03.2025 ಪತ್ರಗಳ ಆಧಾರದ ಮೇಲೆ ಅರ್ಹ 41 ವಿದ್ಯಾರ್ಥಿಗಳನ್ನು ಉಳಿಸುತ್ತಾ, ಅನಧಿಕೃತವಾಗಿ ನೊಂದಾಯಿಸಿರುವ 44 ವಿದ್ಯಾರ್ಥಿಗಳ ವಿರವರವನ್ನು Deletion flag ನಲ್ಲಿ ಇರಿಸುವ ಕ್ರಮ ವಹಿಸಲಾಗಿದೆ.
ಅಂತಿಮ ಪ್ರವೇಶ ಪತ್ರಗಳನ್ನು ಬಿಡುಗಡೆಗೊಳಿಸಿದ ನಂತರ 44 ವಿದ್ಯಾರ್ಥಿಗಳ ಪ್ರವೇಶ ಪತ್ರ ಬಾರದಿರುವುದನ್ನು ಗಮನಿಸಿ ದಿನಾಂಕ: 13.03.2025 ರಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳು ಈ ಕಛೇರಿಗೆ ಮನವಿಯನ್ನು ಸಲ್ಲಿಸಿರುತ್ತಾರೆ. (ಪ್ರತಿ ಲಗತ್ತಿಸಿದೆ) ಸದರಿ ಮನವಿಯಲ್ಲಿ ಈ ಸಂಬಂಧ ಪರಿಶೀಲನೆ ಅವಧಿಯಲ್ಲಿ ಮಕ್ಕಳ ದಾಖಲಾತಿಗೆ ಪೂರಕ ದಾಖಲೆಗಳನ್ನು ಕೊಡುವಾಗ ನಜರ್ ಚ್ಯುತಿಯಿಂದ ತಪ್ಪಾಗಿದ್ದು, 44 ವಿದ್ಯಾರ್ಥಿಗಳು ಅಂತಿಮ ಪ್ರವೇಶ ಪತ್ರಗಳು ಬಾರದೇಇರುವುದರಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಅಸ್ವಸ್ಥರಾಗಿರುವುದಾಗಿ ತಿಳಿಸಿ ಸದರಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ತಡೆಹಿಡಿದಿರುವ ಪ್ರವೇಶ ಪತ್ರಗಳನ್ನು ಬಿಡುಗಡೆಗೊಳಿಸುವಂತೆ ಕೋರಿರುತ್ತಾರೆ. ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ಮುಖ್ಯೋಪಾಧ್ಯಾಯರ ಕಡೆ ಒತ್ತಾಯಪೂರಕವಾಗಿ ಲಿಖಿತ ಹೇಳಿಕೆಯನ್ನು ಪಡೆದಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾರೆ.
ಆದ್ದರಿಂದ ವಿಭಾಗೀಯ ಕಾರ್ಯದರ್ಶಿಗಳು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಬೆಳಗಾವಿ ವಿಭಾಗ, ಇವರು ಖುದ್ದಾಗಿ ಭೇಟಿ ನೀಡಿ ಈ ಪ್ರಕರಣದ ಬಗ್ಗೆ ವಿಚಾರಣೆ ಮಾಡಿ, ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ದೃಢೀಕೃತ ದಾಖಲೆಯ ವರದಿಯನ್ನು ಈ ಕಛೇರಿಗೆ ದಿನಾಂಕ: 17.03.2025 ರ ಮದ್ಯಾಹ್ನದಂದು ಈ ಕಛೇರಿಗೆ ಸಲ್ಲಿಸುವಂತೆ ತಿಳಿಸಿದೆ. ಈ ಪ್ರಕರಣಕ್ಕೆ ನಿಮ್ಮ ಪರವಾಗಿ ಯರನ್ನೂ ಯೋಜಿಸದೇ ತಾವೇ ಖುದ್ದಾಗಿ ಭೇಟಿ ನೀಡಿ ಸ್ವ ಅಭಿಪ್ರಾಯದೊಂದಿಗೆ ಮೇಲ್ಕಂಡ 44 ಅನಧಿಕೃತವಾಗಿ ನೊಂದಾಯಿಸಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡಬೇಕೋ? ಇಲ್ಲವೋ? ಎಂಬುದರ ಬಗ್ಗೆ ತುರ್ತಾಗಿ ವರದಿ ಸಲ್ಲಿಸಲು ತಿಳಿಸಿದೆ. ಈ ಪತ್ರದೊಂದಿಗೆ ಉಪನಿರ್ದೇಶಕರು, ಚಿಕ್ಕೋಡಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿಯನ್ನು ಹಾಗೂ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳ ಮನವಿ ಪತ್ರವನ್ನು ಇದರೊಂದಿಗೆ ಲಗತ್ತಿಸಿ ಸಲ್ಲಿಸಿದೆ.

