ಬೆಂಗಳೂರು : ಮಾ.31 ರೊಳಗೆ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ಉಲ್ಲೇಖಿತ ಅಂತರಿಕ ಸುತ್ತೋಲೆಯಲ್ಲಿ (ಲಗತ್ತಿಸಿದೆ) ದಿನಾಂಕ:15.03.2025 ರೊಳಗಾಗಿ ಹೊರಡಿಸುವ ಹೆಚ್ಚುವರಿ / ಪುನರ್ವಿನಿಯೋಗ ಆದೇಶಗಳನ್ನು ಒಳಗೊಂಡಂತೆ ಯಾವುದೇ ಹಣ ಬಿಡುಗಡೆಗೆ ಅನುಮತಿಸುವ ಸಂಧರ್ಭಗಳಲ್ಲಿ ತತ್ಸಂಬಂಧ ಬಿಲ್ಲುಗಳನ್ನು, ಆರ್ಥಿಕ ಇಲಾಖೆಯಿಂದ ಹೊರಡಿಸಲಾಗುವ ಹಿಂಬರಹದ ದಿನಾಂಕದಿಂದ 10 ದಿನಗಳೊಳಗಾಗಿ ಖಜಾನೆಗೆ ಸಲ್ಲಿಸುವಂತೆ ಹಾಗೂ ದಿನಾಂಕ:15.03.2025 ರ ನಂತರ ಹೊರಡಿಸಲಾಗುವ ಇಂತಹ ಹಿಂಬರಹಗಳಲ್ಲಿ, ಹಿಂಬರಹದ ದಿನಾಂಕದಿಂದ 07 ದಿನಗಳೊಳಗಾಗಿ ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸಲು ಸೂಚಿಸುವಂತೆ ತಿಳಿಸಲಾಗಿರುತ್ತದೆ.
ಆದರೆ, ಈ ಆಂತರಿಕ ಸುತ್ತೋಲೆಯನ್ನು ಹೊರಡಿಸುವುದಕ್ಕಿಂತ ಮುಂಚೆ ಹೊರಡಿಸಲಾಗಿರುವ ಹೆಚ್ಚುವರಿ / ಪುನರ್ವಿನಿಯೋಗ ಆದೇಶಗಳಿಗೆ ಮತ್ತು ಅನುದಾನ ಸೆಳೆಯಲು ಸಹಮತಿಸಿದ ಹಿಂಬರಹಗಳಿಗೆ ಸಂಬಂಧಿಸಿದಂತಹ ಬಿಲ್ಲುಗಳನ್ನು ಖಜಾನೆಯಲ್ಲಿ ಸ್ವೀಕರಿಸುವಂತೆ ತಿಳಿಸಲು ನಾನು ನಿರ್ದೇಶಿತಳಾಗಿದ್ದೇನೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ.
