ಏಷ್ಯಾದ ನಂಬರ್ ಒನ್ ಶ್ರೀಮಂತ ಮುಖೇಶ್ ಅಂಬಾನಿ ಮತ್ತು ಅವರ ಫ್ಯಾಮಿಲಿ ಜೊತೆಗೆ ಇಂಡಿಯಾದ ಬೇರೆ ಬೇರೆ ಶ್ರೀಮಂತರು ಕೋಟಿ ಕೋಟಿ ಬೆಲೆ ಬಾಳುವ ಕಾರುಗಳನ್ನು ಇಟ್ಟುಕೊಂಡಿದ್ದಾರೆ. ಅಂಬಾನಿ ಫ್ಯಾಮಿಲಿ ಹತ್ತಾರು ರೋಲ್ಸ್ ರಾಯ್ಸ್ಗಳನ್ನು ಇಟ್ಟುಕೊಂಡಿದ್ರೂ, ಇಂಡಿಯಾದಲ್ಲಿ ಅತಿ ಕಾಸ್ಟ್ಲಿ ಕಾರು ಇರೋದು ಮಾತ್ರ ಯೋಹನ್ ಪೂನಾವಾಲಾ ಬಳಿ. ಅವರು ರೀಸಂಟಾಗಿ 22 ಕೋಟಿ ರೂಪಾಯಿ ಕೊಟ್ಟು ರೋಲ್ಸ್ ರಾಯ್ಸ್ ಫ್ಯಾಂಟಮ್ VIII ಇಡಬ್ಲ್ಯೂಬಿ ಕಾರು ತಗೊಂಡಿದ್ದಾರೆ. ಇಂಡಿಯಾದಲ್ಲಿ ಅತಿ ಕಾಸ್ಟ್ಲಿ ಕಾರು ಇಟ್ಟುಕೊಂಡಿರೋರು ಯಾರು ಅಂತಾ ಇಲ್ಲಿ ನೋಡೋಣ.
- ಯೋಹನ್ ಪೂನಾವಾಲಾ: ಇವರು 22 ಕೋಟಿ ರೂಪಾಯಿ ಬೆಲೆಬಾಳುವ ರೋಲ್ಸ್ ರಾಯ್ಸ್ ಫ್ಯಾಂಟಮ್ VIII ಇಡಬ್ಲ್ಯೂಬಿ ಕಾರು ತಗೊಂಡಿದ್ದಾರೆ. ಇವರ ಕಾರು ಕಲೆಕ್ಷನ್ ಸಿಕ್ಕಾಪಟ್ಟೆ ಫೇಮಸ್. ಇವರು ತಗೊಂಡಿರೋ ರೋಲ್ಸ್ ರಾಯ್ಸ್ ಕಾರು ಬೊಹೆಮಿಯನ್ ರೆಡ್ ಕಲರ್ನಲ್ಲಿದೆ. ಇದರಲ್ಲಿ ಗೋಲ್ಡ್ ಸ್ಪಿರಿಟ್ ಆಫ್ ಎಕ್ಸ್ಟೆಸಿ, ಬೆಸ್ಪೋಕ್ ಕೋಚ್ ಲೈನ್ ಮತ್ತೆ 22 ಇಂಚಿನ ಬ್ರಷ್ಡ್ ಸಿಲ್ವರ್ ಅಲಾಯ್ ವೀಲ್ಸ್ಗಳಿವೆ.
- ನೀತಾ ಅಂಬಾನಿ: ಮುಖೇಶ್ ಅಂಬಾನಿ ಹೆಂಡತಿ ನೀತಾ ಅಂಬಾನಿ ಕೂಡಾ 15 ಕೋಟಿ ರೂಪಾಯಿ ಬೆಲೆಬಾಳುವ ರೋಲ್ಸ್ ರಾಯ್ಸ್ ಫ್ಯಾಂಟಮ್ VIII ಇಡಬ್ಲ್ಯೂಬಿ ಕಾರು ತಗೊಂಡಿದ್ದಾರೆ. ಇದು ರೋಸ್ ಕ್ವಾರ್ಟ್ಜ್ ಫಿನಿಶ್ನಲ್ಲಿದೆ.
- ವಿ.ಎಸ್ ರೆಡ್ಡಿ: ಬ್ರಿಟಿಷ್ ಬಯಾಲಾಜಿಕಲ್ಸ್ನ ಚೇರ್ಮನ್ ವಿ.ಎಸ್ ರೆಡ್ಡಿ 14 ಕೋಟಿ ರೂಪಾಯಿ ಬೆಲೆಬಾಳುವ ಬೆಂಟ್ಲಿ ಮುಲ್ಸಾನೆ ಇಡಬ್ಲ್ಯೂಬಿ ಸೆಂಟೆನರಿ ಎಡಿಷನ್ ಕಾರು ತಗೊಂಡಿದ್ದಾರೆ. ಬೆಂಟ್ಲಿ 100 ವರ್ಷ ಆಗಿದ್ದಕ್ಕೆ ಈ ಕಾರು ಬಿಡುಗಡೆ ಮಾಡಿದ್ರು.
- ಇಮ್ರಾನ್ ಹಶ್ಮಿ: ಬಾಲಿವುಡ್ ಆಕ್ಟರ್ ಇಮ್ರಾನ್ ಹಶ್ಮಿ 12.5 ಕೋಟಿ ರೂಪಾಯಿ ಬೆಲೆಬಾಳುವ ರೋಲ್ಸ್ ರಾಯ್ಸ್ ಘೋಸ್ಟ್ ಬ್ಲ್ಯಾಕ್ ಬ್ಯಾಡ್ಜ್ ಕಾರು ತಗೊಂಡಿದ್ದಾರೆ. ಇದು ಕಪ್ಪು ಬಣ್ಣದಲ್ಲಿದೆ.
- ನಸೀರ್ ಖಾನ್: ಹೈದರಾಬಾದ್ ಮೂಲದ ಬಿಸಿನೆಸ್ಮ್ಯಾನ್ ನಸೀರ್ ಖಾನ್ 12 ಕೋಟಿ ರೂಪಾಯಿ ಬೆಲೆಬಾಳುವ ಮ್ಯಾಕ್ಲಾರೆನ್ 765 ಎಲ್ಟಿ ಸ್ಪೈಡರ್ ಕಾರು ತಗೊಂಡಿದ್ದಾರೆ. ಇದರಲ್ಲಿ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ 8 ಇಂಜಿನ್ ಇದೆ.
ಇಂಡಿಯಾದಲ್ಲಿ ಕಾಸ್ಟ್ಲಿ ಕಾರುಗಳ ಮಾರ್ಕೆಟ್ ಸಿಕ್ಕಾಪಟ್ಟೆ ಬೆಳೀತಾ ಇದೆ. ಇಲ್ಲಿನ ಶ್ರೀಮಂತರು ಲೇಟೆಸ್ಟ್ ಮತ್ತೆ ಕಾಸ್ಟ್ಲಿ ಕಾರುಗಳನ್ನು ತಗೊಳ್ಳೋಕೆ ಇಷ್ಟಪಡ್ತಿದ್ದಾರೆ.