ಪ್ರಪಂಚದಾದ್ಯಂತ ಉದ್ದನೆಯ ಕೂದಲನ್ನು ಸ್ತ್ರೀತ್ವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ, ಚೀನಾದ ಹುವಾಂಗ್ಲುಯೊ ಯಾಒ ಗ್ರಾಮದ ಮಹಿಳೆಯರು ತಮ್ಮ ಉದ್ದನೆಯ ಕೂದಲಿನಿಂದ ವಿಶ್ವದ ಗಮನ ಸೆಳೆದಿದ್ದಾರೆ. ಈ ಗ್ರಾಮವನ್ನು ‘ಉದ್ದ ಕೂದಲು ಗ್ರಾಮ’ ಎಂದೂ ಕರೆಯುತ್ತಾರೆ.
ಇಲ್ಲಿನ ಮಹಿಳೆಯರು 6 ರಿಂದ 7 ಅಡಿ ಉದ್ದದ ಕೂದಲು ಬೆಳೆಸುತ್ತಾರೆ. ಅವರು ತಮ್ಮ ಜೀವನದಲ್ಲಿ ಒಮ್ಮೆ ಮಾತ್ರ, 18 ವರ್ಷ ವಯಸ್ಸಾದಾಗ ಕೂದಲು ಕತ್ತರಿಸುತ್ತಾರೆ. ಕತ್ತರಿಸಿದ ಕೂದಲನ್ನು ಸಂರಕ್ಷಿಸಿ, ನಂತರ ಬಳಸುತ್ತಾರೆ. ಉದ್ದನೆಯ ಕೂದಲು ಬೆಳೆಸುವುದರಿಂದ ದೀರ್ಘಾಯುಷ್ಯ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ.
ಅವರ ಕೂದಲಿನ ರಕ್ಷಣೆಗೆ ವಿಶೇಷ ನೈಸರ್ಗಿಕ ಶಾಂಪೂ ಬಳಸುತ್ತಾರೆ. ಹುದುಗಿಸಿದ ಅಕ್ಕಿ ನೀರು, ಗಿಡಮೂಲಿಕೆಗಳು, ಪೊಮೆಲೊ ಸಿಪ್ಪೆ ಮತ್ತು ಚಹಾ ಹೊಟ್ಟು ಬಳಸಿ ಶಾಂಪೂ ತಯಾರಿಸುತ್ತಾರೆ.
ಅವಿವಾಹಿತ ಮಹಿಳೆಯರು ತಲೆಗೆ ಕಪ್ಪು ಶಿರೋವಸ್ತ್ರ ಧರಿಸುತ್ತಾರೆ. ಮದುವೆಯಾದವರು ತಲೆಯ ಸುತ್ತ ಕೂದಲು ಸುತ್ತುತ್ತಾರೆ. ಮಕ್ಕಳು ಇದ್ದರೆ, ಕತ್ತರಿಸಿದ ಕೂದಲಿನಿಂದ ರಿಬನ್ ಮಾಡುತ್ತಾರೆ.
ಈ ವಿಶೇಷ ಕೂದಲು, ಚೀನಾದ ಯಾಒ ಗ್ರಾಮದ ಮಹಿಳೆಯರ ಸಂಪ್ರದಾಯ ಮತ್ತು ಸಂಸ್ಕೃತಿಯ ಭಾಗವಾಗಿದೆ.