ಬೆಂಗಳೂರು : ಪ್ರದೀಪ್ ಈಶ್ವರ್ ಆಕ್ಸಿಡೆಂಟಲ್ ಅಲ್ಲ ಜನಮೆಚ್ಚಿದ ಶಾಸಕ ಎಂದು ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಆಕ್ಸಿಡೆಂಟಲ್ ಅಲ್ಲ ಜನಮೆಚ್ಚಿದ ಶಾಸಕ!ಕ್ಷೇ ತ್ರದ ಜನ ಪಾಳೇಗಾರ ಎಂದು ಮೆರೆಯುತ್ತಿದ್ದ, ನಿಮ್ಮ ಭ್ರಷ್ಟ ಮಾಜಿ ಮಂತ್ರಿಯನ್ನು ಸೋಲಿಸಿ ಮನೆಮಗನ ಕೈ ಹಿಡಿದು ಗೆಲ್ಲಿಸಿದ್ದಾರೆ.
ಅಲ್ಲಿ ನಡೆಯುತ್ತಿದ್ದದ್ದು ಬಿಜೆಪಿ ಅಥವಾ ಸಂಘದ ಶಾಖೆಯ ಕಾರ್ಯಕ್ರಮವಲ್ಲ ಬಿಜೆಪಿ ನಾಯಕರ ಗುಣಗಾನ ಮಾಡಲು. ಅದು ಕೈವಾರ ತಾತಯ್ಯನವರ ಜಯಂತಿ, ಸರ್ಕಾರಿ ಕಾರ್ಯಕ್ರಮ. ಸರ್ಕಾರಿ ಕಾರ್ಯಕ್ರಮಗಳಿಗೆ ಒಂದು ಶಿಷ್ಟಾಚಾರವಿರುತ್ತದೆ. ಆ ಕನಿಷ್ಟ ಜ್ಞಾನವಿಲ್ಲದೆ, ವೇದಿಕೆಯ ಗೌರವ ಮರೆತು ಯಾರನ್ನೋ ಹೊಗಳಿ ಅಟ್ಟಕೇರಿಸಲು ಹೊರಟರೆ ಸಹಿಸಬೇಕೇ?ಸಹನೆಯ ಕಟ್ಟೆಯೊಡೆದು ಶಾಸಕರಾದ Pradeep Eshwar Nimmondige ಪ್ರಶ್ನಿಸಿ ಆಕ್ಷೇಪಿಸಿದ್ದಾರೆ. ನಿಮ್ಮ ಪಾಳೇಗಾರಿಕೆ ಕಾಲ ಮುಗಿದಿದೆ, ಈಗಿರುವುದು ಕಾಂಗ್ರೆಸ್ ಆಡಳಿತದ ಪ್ರಜಾಪ್ರಭುತ್ವ! ಎಂದು ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.