ಆಂಧ್ರಪ್ರದೇಶದಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಭವಿಷ್ಯವಿಲ್ಲ ಎಂದು ಮಕ್ಕಳ ಕೈ ಕಾಲು ಕಟ್ಟಿ ಕೊಲೆ ಮಾಡಿದ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಕಾಲು, ಕೈಗಳನ್ನು ಕಟ್ಟಿಸಿ ನೀರಿನ ಬಕೆಟ್ನಲ್ಲಿ ಮುಳುಗಿಸಿ, ಹತ್ಯೆ ಮಾಡಿದ್ದಾನೆ. ನಂತರ ಆತನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.ಸ್ಪರ್ಧಾತ್ಮಕ ಜಗತ್ತಿನಲ್ಲಿ ತನ್ನ ಮಕ್ಕಳಿಗೆ ಭವಿಷ್ಯವಿಲ್ಲ ಎಂದು, ತನ್ನ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿದ್ದಾನೆ.
ತಾಡೇಪಲ್ಲಿಗುಡ್ಡೆ ನಿವಾಸಿ ವಾನಪಳ್ಳಿ ಚಂದ್ರಕಿಷೋರ್ (37) ತನ್ನ ಪತ್ನಿ ತಾನುಜಾ ಜೊತೆ ಕಾಕಿನಾಡ ಅರ್ಬನ್ 2ನೇ ವಿಭಾಗ ತೋಟ ಸುಬ್ಬಾರಾವುನಗರ ರಸ್ತೆ ನಂಬರ್ -2, ರಾಮಾನಾಯಪೇಟ ಭೂದೇವಿ ಅಪಾರ್ಟ್ಮೆಂಟ್ನಲ್ಲಿ ಪ್ಲಾಟ್ ನಂಬರ್ 202ರಲ್ಲಿ ಒಂಬತ್ತು ವರ್ಷಗಳಿಂದ ವಾಸಿಸುತ್ತಿದ್ದನು. ತಡೆಪಲ್ಲಿಗುಡೇನಿ ಮೂಲದ ವನಪಲ್ಲಿ ಚಂದ್ರಕಿಶೋರ್ ಸ್ಥಳೀಯ ಒಎನ್ ಜಿಸಿ ಕಚೇರಿಯಲ್ಲಿ ಸಹಾಯಕ ಲೆಕ್ಕಪತ್ರಗಾರರಾಗಿ ಕೆಲಸ ಮಾಡುತ್ತಿದ್ದನು,.ಅವರಿಗೆ ಇಬ್ಬರು ಮಕ್ಕಳಿದ್ದರು, ಅವರಲ್ಲಿ ದೊಡ್ಡ ಮಗ ವಾನಪಳ್ಳಿ ಜೋಶಿಲ್. …
ಮಕ್ಕಳು ಕಡಿಮೆ ಅಂಕ ಪಡೆಯುತ್ತಿದ್ದ ಬಗ್ಗೆ ಮನೆಯಲ್ಲಿ ಹಲವು ಬಾರಿ ಗಲಾಟೆಯಾಗಿತ್ತು. ಹೋಳಿ ಸಂದರ್ಭವಾದ್ದರಿಂದ ಪತ್ನಿ ತನುಜಾ ಹಾಗೂ ಇಬ್ಬರು ಮಕ್ಕಳನ್ನು ತನ್ನ ಕಚೇರಿಗೆ ಕರೆತಂದಿದ್ದ ಚಂದ್ರಕಿಶೋರ್ ಬಳಿಕ ಪತ್ನಿಗೆ ಮಕ್ಕಳಿಗೆ ಸಮವಸ್ತ್ರ ಹೊಲಿಸಲು ಟೇಲರ್ ಬಳಿ ಕರೆದುಕೊಂಡು ಹೋಗುತೇನೆ. ನೀನು ಇಲ್ಲಿಯೇ ಇರು ಎಂದು ಹೇಳಿ ಪತ್ನಿಯನ್ನು ಕಚೇರಿಯಲ್ಲಿ ಕೂರಿಸಿ ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.
ಬಳಿಕ ಮಕ್ಕಳ ಕೈ-ಕಾಲು ಕಟ್ಟಿಹಾಕಿ, ತಲೆಯನ್ನು ನೀರು ತುಂಬಿದ ಬಕೆಟ್ ನಲ್ಲಿ ಮುಳುಗಿಸಿ ಕೊಂದಿದ್ದಾರೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಎಷ್ಟುಹೊತ್ತಾದರೂ ಬಾರದಿದ್ದಾಗಿ ಪತ್ನಿ ಮನೆಗೆ ಬಂದಿದ್ದಾಳೆ. ಮನೆಗೆ ಬಂದು ನೋಡಿದಗಾ ಪತಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರುವುದನ್ನು ಕಂಡು ಕಂಗಾಲಾಗಿದ್ದಾಳೆ. ಸಾವಿಗೂ ಮುನ್ನ ಚಂದ್ರಕಿಶೋರ್ ಡೆತ್ ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಭವಿಷ್ಯವಿಲ್ಲ…!
ಪೊಲೀಸರು ಮತ್ತು ಅವರ ಪತ್ನಿ ಬಂದು ಪರಿಶೀಲಿಸಿದಾಗ, ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಭವಿಷ್ಯವಿಲ್ಲ ಮತ್ತು ಅದಕ್ಕಾಗಿಯೇ ಮಕ್ಕಳನ್ನು ಕೊಲ್ಲುವ ಮೂಲಕ ಸಾಯುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಜಿಎಚ್ ಗೆ ಸ್ಥಳಾಂತರಿಸಲಾಗಿದ್ದು, ಡೆತ್ ನೋಟ್ ವಶಪಡಿಸಿಕೊಳ್ಳಲಾಗಿದೆ.