ಬೆಂಗಳೂರು : ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದು, ಬಾಕಿ ವೇತನ ಬಿಡುಗಡೆ ಮಾಡಿದೆ.
ಯಾದಗಿರಿ ಜಿಲ್ಲೆಯ ಆರೋಗ್ಯ ಇಲಾಖೆಯ ಹೊರಗುತ್ತಿಗೆ 120 ನೌಕರರ 5.25 ಕೋಟಿ ವೇತನವನ್ನು ಸರ್ಕಾರ ಬಾಕಿ ಉಳಿಸಿಕೊಂಡಿತ್ತು, ಇದೀಗ ಸರ್ಕಾರ 5.25 ಕೋಟಿ ಬಾಕಿ ವೇತನ ಬಿಡುಗಡೆ ಮಾಡಿದೆ. ಈ ಮೂಲಕ ನೌಕರರಿಗೆ ಸರ್ಕಾರ ಕೊಂಚ ರಿಲೀಫ್ ನೀಡಿದೆ. ವೇತನ ಬಿಡುಗಡೆ ಆಗಿರುವ ಬಗ್ಗೆ ಯಾದಗಿರಿ ಡಿಹೆಚ್ಒ ಡಾ.ಮಹೇಶ್ ಬಿರಾದಾರ ಮಾಹಿತಿ ನೀಡಿದ್ದಾರೆ.