alex Certify ಗ್ರಾಮೀಣ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಇ-ಖಾತಾ ನೀಡಲು ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮೀಣ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಇ-ಖಾತಾ ನೀಡಲು ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಬೆಂಗಳೂರು: ಅನಧಿಕೃತ ಬಡಾವಣೆ, ನಿವೇಶನ, ಮನೆಗಳಲ್ಲಿ ಜೀವನ ನಡೆಸುತ್ತಿರುವ ಗ್ರಾಮೀಣ ಪ್ರದೇಶದ ಜನತೆಗೆ ಬಿ ನಮೂನೆ ಇ-ಖಾತಾ ನೀಡಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಇದಕ್ಕಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ -2025ಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸರ್ಕಾರದ ಈ ನಿರ್ಧಾರದ ಅನ್ವಯದ ಗ್ರಾಮೀಣ ಪ್ರದೇಶದ ಅನಧಿಕೃತ ಆಸ್ತಿಗಳಿಗೆ ಶುಲ್ಕ ಪಡೆದುಕೊಂಡು ಬಿ ನಮೂನೆಯಲ್ಲಿ ಇ-ಖಾತಾ ವಿತರಿಸಲಾಗುತ್ತದೆ. ಈ ಮೂಲಕ ತೆರಿಗೆ ವ್ಯಾಪ್ತಿಗೆ ಅವುಗಳನ್ನು ಒಳಪಡಿಸಲಾಗುವುದು. ಈ ಕ್ರಮದಿಂದ ಆಸ್ತಿ ಮಾಲೀಕರ ಆತಂಕ ದೂರವಾಗಲಿದೆ. ಜೊತೆಗೆ ಆಯಾ ಗ್ರಾಮ ಪಂಚಾಯ್ತಿಗಳಿಗೆ ಆದಾಯ ಹೆಚ್ಚಲಿದೆ. ಸೌಲಭ್ಯ ಕಲ್ಪಿಸಲು ಕೂಡ ಅನುಕೂಲವಾಗುತ್ತದೆ.

ಗ್ರಾಮೀಣ ಪ್ರದೇಶದಲ್ಲಿ 96 ಲಕ್ಷ ಅನಧಿಕೃತ ಆಸ್ತಿಗಳಿವೆ ಎಂದು ಹೇಳಲಾಗಿದ್ದು, ಗ್ರಾಮ ಪಂಚಾಯಿತಿಗಳು ಅಗತ್ಯ ಸೌಲಭ್ಯ ಕಲ್ಪಿಸಿದ್ದರೂ ಇ- ಸ್ವತ್ತು, ಗುರುತಿನ ಸಂಖ್ಯೆ ಅಥವಾ ಬಿ -ಖಾತಾ ಇಲ್ಲದ ಕಾರಣ ತೆರಿಗೆ ವಸೂಲಿ ಮಾಡಲು ಸಮಸ್ಯೆಯಾಗಿತ್ತು. ಆಸ್ತಿಗಳನ್ನು ಹೊಂದಿದ ಮಾಲೀಕರಿಗೆ ವಹಿವಾಟು, ಬ್ಯಾಂಕ್ ಸಾಲ ಪಡೆಯಲು ತೊಂದರೆಯಾಗಿತ್ತು. ಇ-ಖಾತಾ ನೀಡುವುದರಿಂದ ಈ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...