
ಮೋದಿ ಸರ್ಕಾರ ಕಷ್ಟಪಟ್ಟು ದುಡಿಯೋ ಸಾಮಾನ್ಯ ಜನರಿಗೋಸ್ಕರ ಒಂದು ಒಳ್ಳೆ ಸ್ಕೀಮ್ ತಂದಿದೆ. ಅದೇನಪ್ಪಾ ಅಂದ್ರೆ, ತಿಂಗಳಿಗೆ ಸ್ವಲ್ಪ ದುಡ್ಡು ಕಟ್ಟಿದ್ರೆ 60 ವರ್ಷ ಆದ್ಮೇಲೆ ತಿಂಗಳಿಗೆ 3 ಸಾವಿರ ರೂ. ಪಿಂಚಣಿ ಸಿಗುತ್ತೆ.
ಈ ಸ್ಕೀಮ್ ಹೆಸರು ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆ’ (PM-SYM). ಈ ಸ್ಕೀಮ್ 2019 ರಲ್ಲಿ ಶುರು ಮಾಡಿದ್ದು. ಅಸಂಘಟಿತ ವಲಯದಲ್ಲಿ ಕೆಲಸ ಮಾಡೋರಿಗೆ ಇದು ತುಂಬಾ ಉಪಯೋಗ ಆಗುತ್ತೆ.
ಯಾರಿಗೆಲ್ಲಾ ಇದು ಸಿಗುತ್ತೆ ಅಂದ್ರೆ, 18 ರಿಂದ 40 ವರ್ಷ ವಯಸ್ಸಿನವರು, ತಿಂಗಳಿಗೆ 15 ಸಾವಿರ ರೂಪಾಯಿಗಿಂತ ಕಡಿಮೆ ದುಡಿಯೋರು ಈ ಸ್ಕೀಮ್ ಗೆ ಸೇರಬಹುದು. ಗುಡಿಸೋರು, ಲಾಂಡ್ರಿ ಮಾಡೋರು, ರಿಕ್ಷಾ ಎಳೆಯೋರು, ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡೋರು ಎಲ್ಲರೂ ಸೇರಬಹುದು.
ಈ ಸ್ಕೀಮ್ ಗೆ ಸೇರೋಕೆ ತಿಂಗಳಿಗೆ 55 ರೂಪಾಯಿಯಿಂದ 200 ರೂಪಾಯಿವರೆಗೆ ಕಟ್ಟಬೇಕು. ಎಷ್ಟು ಬೇಗ ಸೇರಿದ್ರೆ ಅಷ್ಟು ಕಡಿಮೆ ಕಟ್ಟಬೇಕು. 60 ವರ್ಷ ಆದ್ಮೇಲೆ ತಿಂಗಳಿಗೆ 3 ಸಾವಿರ ರೂ. ಪಿಂಚಣಿ ಬರುತ್ತೆ.
ಇಲ್ಲಿ ಒಂದು ಒಳ್ಳೆ ವಿಷ್ಯ ಏನಪ್ಪಾ ಅಂದ್ರೆ, ನೀವು ಎಷ್ಟು ದುಡ್ಡು ಕಟ್ತಿರೋ ಅಷ್ಟೇ ದುಡ್ಡನ್ನ ಸರ್ಕಾರ ಕೂಡ ಕಟ್ಟುತ್ತೆ.
ಈ ಸ್ಕೀಮ್ ಇಂದ ಕಷ್ಟಪಟ್ಟು ದುಡಿಯೋ ಜನರಿಗೆ ಮುಪ್ಪಿನ ಕಾಲದಲ್ಲಿ ಸ್ವಲ್ಪ ಆದ್ರೂ ದುಡ್ಡು ಸಿಗುತ್ತೆ.