alex Certify ವಿಟಮಿನ್ ಬಿ12 ಕೊರತೆಯಿಂದ ಬಳಲುತ್ತಿದ್ದಾರೆ ಶೇ.57 ಕ್ಕೂ ಅಧಿಕ ಕಾರ್ಪೊರೇಟ್ ಉದ್ಯೋಗಿಗಳು ; ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಟಮಿನ್ ಬಿ12 ಕೊರತೆಯಿಂದ ಬಳಲುತ್ತಿದ್ದಾರೆ ಶೇ.57 ಕ್ಕೂ ಅಧಿಕ ಕಾರ್ಪೊರೇಟ್ ಉದ್ಯೋಗಿಗಳು ; ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ಇತ್ತೀಚೆಗೆ ಮೆಡಿಬಡ್ಡಿ ಅನ್ನೋ ಸಂಸ್ಥೆ ಒಂದು ಸರ್ವೆ ಮಾಡಿದೆ. ಆ ಸರ್ವೆಯಲ್ಲಿ ಕಾರ್ಪೊರೇಟ್ ಕೆಲಸ ಮಾಡೋ ಮಂದಿಗೆ ವಿಟಮಿನ್ ಬಿ12 ಕೊರತೆ ಜಾಸ್ತಿ ಆಗ್ತಿದೆ ಅಂತಾ ಗೊತ್ತಾಗಿದೆ. ಸುಮಾರು 57% ಗಂಡಸರಿಗೆ ಬಿ12 ಕೊರತೆ ಇದೆ ಅಂತಾ ಸರ್ವೆಯಲ್ಲಿ ತಿಳಿದುಬಂದಿದೆ. ಹೆಂಗಸರಲ್ಲಿ ಕೂಡಾ 50% ಮಂದಿಗೆ ಈ ಸಮಸ್ಯೆ ಇದೆ.

ಸುಮಾರು 4,400 ಜನರನ್ನು ಪರೀಕ್ಷೆ ಮಾಡಿ ಈ ಸರ್ವೆ ಮಾಡಲಾಗಿದೆ. ಅದರಲ್ಲಿ 3,338 ಗಂಡಸರು ಮತ್ತು 1,059 ಹೆಂಗಸರು ಇದ್ದರು. ಈ ಎಲ್ಲಾ ಜನರೂ ಸಿಟಿಗಳಲ್ಲಿ ಕಾರ್ಪೊರೇಟ್ ಕೆಲಸ ಮಾಡೋರು.

ಈ ತರ ಆಗೋಕೆ ಮುಖ್ಯ ಕಾರಣ ಅಂದ್ರೆ, ಸರಿಯಾಗಿ ಊಟ ಮಾಡದಿರೋದು. ಟೈಮಿಗೆ ಊಟ ಮಾಡೋದಿಲ್ವಂತೆ. ಜಾಸ್ತಿ ಟೆನ್ಷನ್ ತಗೋತಾರಂತೆ. ಸಸ್ಯಹಾರಿಗಳಾದರೆ ಬಿ12 ಕೊರತೆ ಜಾಸ್ತಿ ಆಗೋ ಚಾನ್ಸ್ ಇದೆ. ರೆಡಿಮೇಡ್ ಫುಡ್ ಜಾಸ್ತಿ ತಿನ್ನೋದು, ಮದ್ಯಪಾನ, ಕಾಫಿ ಜಾಸ್ತಿ ಕುಡಿಯೋದ್ರಿಂದ ಕೂಡಾ ಈ ತರ ಆಗುತ್ತೆ ಅಂತಾ ಡಾಕ್ಟರ್ಸ್ ಹೇಳ್ತಿದ್ದಾರೆ.

ಬಿ12 ಕೊರತೆ ಇದ್ರೆ ಏನೇನು ತೊಂದರೆ ಆಗುತ್ತೆ ಅಂದ್ರೆ, ಸುಸ್ತು ಜಾಸ್ತಿ ಆಗುತ್ತೆ. ಕೈ ಕಾಲು ಜುಮ್ ಅಂತಾ ಇರುತ್ತೆ. ನೆನಪಿನ ಶಕ್ತಿ ಕಡಿಮೆ ಆಗುತ್ತೆ. ಮೂಡ್ ಸರಿಯಾಗಿರೋದಿಲ್ಲ. ತಲೆ ಸುತ್ತುತ್ತೆ. ಉಸಿರಾಡೋದಕ್ಕೆ ಕಷ್ಟ ಆಗುತ್ತೆ.

ಇದಕ್ಕೆ ಪರಿಹಾರ ಏನು ಅಂದ್ರೆ, ಚಿಕನ್, ಮೊಟ್ಟೆ, ಹಾಲು, ಮೀನು, ಮೊಸರು, ಉಪ್ಪಿನಕಾಯಿ ತಿನ್ನಬೇಕು. ಫುಡ್ ಇಂದ ಸರಿಯಾಗದಿದ್ದರೆ ಮಾತ್ರ ಮಾತ್ರೆ ತಗೋಬೇಕು. ಕಾಫಿ, ಮದ್ಯಪಾನ ಕಡಿಮೆ ಮಾಡಬೇಕು. ಕೆಲಸದ ಮಧ್ಯೆ ಸ್ವಲ್ಪ ರೆಸ್ಟ್ ತಗೋಬೇಕು. ಯೋಗ, ಧ್ಯಾನ ಮಾಡಬೇಕು. ನೀರು ಜಾಸ್ತಿ ಕುಡಿಯಬೇಕು.

ಸಸ್ಯಹಾರಿಗಳಾದ್ರೆ, ಸುಸ್ತು ಜಾಸ್ತಿ ಇದ್ರೆ ಅಥವಾ ಹೊಟ್ಟೆ ಸಮಸ್ಯೆ ಇದ್ರೆ ವರ್ಷಕ್ಕೆ ಒಂದು ಸಲ ಬಿ12 ಟೆಸ್ಟ್ ಮಾಡಿಸಿಕೊಳ್ಳೋದು ಒಳ್ಳೇದು ಅಂತಾ ಡಾಕ್ಟರ್ಸ್ ಹೇಳ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...