
ಕಿಡಿಗೇಡಿಗಳ
ಕೊಲ್ಲಾಪುರ: ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಮೇಲೆ ಕಿಡಿಗೇಡಿಗಳು ಮತ್ತೆ ಕಲ್ಲು ತೂರಾಟ ನಡೆಸಿ ಉದ್ಧಟತನ ಮುಂದುವರೆಸಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರದ ಇಂಚಲಕರಂಜಿ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಬಸ್ ನ ಗಾಜುಗಳು ಪುಡಿಪುಡಿಯಾಗಿವೆ. ಇದರಿಂದ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ.
ಬೆಳಗಾವಿಯ ರಾಯಭಾಗದಿಂದ ಕೊಲ್ಲಾಪುರಕ್ಕೆತೆರಳಿದ್ದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇಂಚಲಕರಂಜಿ ಗ್ರಾಮದಲ್ಲಿ ಹೋಳಿ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟಿಗಳು ಬಂದ್ ಆಗಿದ್ದವು. ಆದರೆ ಕೆಲ ಕಿಡಿಗೇಡಿಗಳು ಬಸ್ ಹಿಂಬದಿಯಿಂದ ಕಲ್ಲು ತೂರಾಟ ನಡೆಸಿದ್ದು, ಬಸ್ ಹಿಂಭಾಗದ ಗಾಜು ಸಂಪೂರ್ನ ಪುಡಿಪುಡಿಯಾಗಿವೆ. ಸದ್ಯ ಪ್ರಯಣಿಕರು ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.