ಬಾಲಿವುಡ್ ನಟ ಹೃತಿಕ್ ರೋಷನ್ ಸಹೋದರಿ ಸುನೈನಾ ರೋಷನ್, ಕುಡಿತದ ಚಟದ ವಿರುದ್ಧ ಹೋರಾಡಿದ ಬಗ್ಗೆ ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ, ಸುನೈನಾ “ಅದು ನನ್ನ ಜೀವನದ ಅತ್ಯಂತ ಕೆಟ್ಟ ಹಂತ” ಎಂದು ಹೇಳಿಕೊಂಡಿದ್ದಾರೆ.
ಆಲ್ಕೋಹಾಲ್ ಚಟದಿಂದ ಹೊರಬರಲು ಸಹಾಯ ಮಾಡಲು ಉತ್ತಮ ಪುನರ್ವಸತಿ ಕೇಂದ್ರವನ್ನು ಹುಡುಕಲು ತಮ್ಮ ಪೋಷಕರನ್ನು ಕೇಳಿದ್ದಾಗಿ ಅವರು ಹಂಚಿಕೊಂಡಿದ್ದಾರೆ.
ಈ ಸಮಯದಲ್ಲಿ, ಅವರ ಕ್ರೆಡಿಟ್ ಕಾರ್ಡ್ ಅನ್ನು ತೆಗೆದುಕೊಳ್ಳಲಾಗಿತ್ತು, ಏಕೆಂದರೆ ಅವರು ತಮ್ಮ ಎಲ್ಲಾ ಹಣವನ್ನು ಮದ್ಯ ಖರೀದಿಸಲು ಖರ್ಚು ಮಾಡುತ್ತಿದ್ದರು. ಅವರಿಗೆ ಮದ್ಯವನ್ನು ನೀಡುವ ಸ್ನೇಹಿತರನ್ನು ಭೇಟಿಯಾಗುವುದನ್ನು ಸಹ ನಿಷೇಧಿಸಲಾಗಿತ್ತು.
ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ, ಸುನೈನಾ “ಮದ್ಯಪಾನವು ನಿಮ್ಮ ಮೇಲೆ ನಿಯಂತ್ರಣವನ್ನು ಹೊಂದಿರದ ಸ್ಥಳವಾಗಿದೆ. ಆದ್ದರಿಂದ ನಾನು ತುಂಬಾ ಕಷ್ಟಕರ ಸಮಯವನ್ನು ಎದುರಿಸುತ್ತಿದ್ದೆ. ಭಾವನಾತ್ಮಕವಾಗಿ ತುಂಬಾ ದುರ್ಬಲಳಾಗಿದ್ದೆ ಮತ್ತು ನನ್ನ ಇಂದ್ರಿಯಗಳನ್ನು ಮರಗಟ್ಟಿಸಲು ಬಯಸಿದ್ದೆ ಹಾಗಾಗಿ ನಾನು ಕುಡಿಯುತ್ತಿದ್ದೆ. ಅದು ನನ್ನ ಜೀವನದ ಅತ್ಯಂತ ಕೆಟ್ಟ ಹಂತ ಎಂದು ನನಗೆ ತಿಳಿದಿದೆ” ಎಂದು ಹೇಳಿದ್ದಾರೆ.
ಕೆಲವೊಮ್ಮೆ, ದಿನವಿಡೀ ಕುಡಿಯುತ್ತಿದ್ದುದಾಗಿ ಹೇಳಿಕೊಂಡ ಅವರು, ನಿಯಂತ್ರಣವಿಲ್ಲದೆ ಬೆಡ್ ನಿಂದ, ಕುಚಿಯಿಂದ ಆನೇಕ ಬಾರಿ ಬಿದ್ದು, ಗಾಯಗೊಂಡಿದ್ದರಂತೆ.
ಎಲ್ಲಾ ಹಣವನ್ನು ಮದ್ಯಕ್ಕಾಗಿ ಖರ್ಚು ಮಾಡುತ್ತಾರೆಂದು ತಿಳಿದಿದ್ದರಿಂದ ತಮ್ಮ ಪೋಷಕರು ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ತೆಗೆದುಕೊಂಡಿದ್ದಲ್ಲದೇ ಹಣ ನೀಡುವುದನ್ನು ನಿಲ್ಲಿಸಿದ್ದರು. ಅಂತಿಮವಾಗಿ ಸುನೈನಾ ರೋಷನ್ ತಮ್ಮ ಮದ್ಯ ವ್ಯಸನವನ್ನು ಜಯಿಸಲು ನಿರ್ಧರಿಸಿದ್ದು, ಪೋಷಕರ ಬಳಿ ನಾನು ಅದರಿಂದ ಹೊರಬರಲು ಬಯಸುತ್ತೇನೆ ಎಂದು ಹೇಳಿದ್ದರಂತೆ. ಮದ್ಯ ವ್ಯಸನ ತೊರೆಯಲು ಉತ್ತಮ ಪುನರ್ವಸತಿ ಕೇಂದ್ರವನ್ನು ಸ್ವತಃ ಹುಡುಕಿಕೊಂಡ ಸುನೈನಾ ಅಂತಿಮವಾಗಿ ಮದ್ಯ ವ್ಯಸನದಿಂದ ಹೊರ ಬಂದಿದ್ದಾರೆ.