ಬೆಂಗಳೂರು : ರಾಜ್ಯದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ.
ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ‘ಬಣ್ಣಗಳು ಬದುಕಿನ ವೈವಿಧ್ಯತೆಯ ಸಂಕೇತ. ಬಣ್ಣಗಳ ಜೊತೆಗೆ ಬಾಂಧವ್ಯ ಬೆಳೆಯುವ ಹೋಳಿ ಹಬ್ಬವು ಸಮಾಜವನ್ನು ಸೌಹಾರ್ದತೆ ಮತ್ತು ಸಹಬಾಳ್ವೆಯ ಹಾದಿಯಲ್ಲಿ ಮುನ್ನಡೆಸಲಿ. ಕೆಡುಕುಗಳೆಲ್ಲವೂ ದಹಿಸಿ, ಸುಖ, ಶಾಂತಿ, ಸಮೃದ್ಧಿಯ ಬಣ್ಣಗಳು ನಿಮ್ಮ ಬದುಕನ್ನು ಆವರಿಸಲಿ’ ಎಂದು ಹಾರೈಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಬಣ್ಣಗಳು ಬದುಕಿನ ವೈವಿಧ್ಯತೆಯ ಸಂಕೇತ. ಬಣ್ಣಗಳ ಜೊತೆಗೆ ಬಾಂಧವ್ಯ ಬೆಳೆಯುವ ಹೋಳಿ ಹಬ್ಬವು ಸಮಾಜವನ್ನು ಸೌಹಾರ್ದತೆ ಮತ್ತು ಸಹಬಾಳ್ವೆಯ ಹಾದಿಯಲ್ಲಿ ಮುನ್ನಡೆಸಲಿ.
ಕೆಡುಕುಗಳೆಲ್ಲವೂ ದಹಿಸಿ, ಸುಖ, ಶಾಂತಿ, ಸಮೃದ್ಧಿಯ ಬಣ್ಣಗಳು ನಿಮ್ಮ ಬದುಕನ್ನು ಆವರಿಸಲಿ ಎಂದು ಹಾರೈಸುತ್ತೇನೆ. #Holi pic.twitter.com/dTC0lsauOm— Siddaramaiah (@siddaramaiah) March 14, 2025