ಬೆಂಗಳೂರು : ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ನಟಿ ರನ್ಯಾ ಗೆಳೆಯ ಆರೋಪಿ ತರುಣ್ ರಾಜು ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆರ್ಥಿಕ ಅಪರಾಧಗಳ ಕೋರ್ಟ್ ಆದೇಶ ಹೊರಡಿಸಿದೆ.
ಡಿಆರ್ ಐ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ತರುಣ ರಾಜುವನ್ನು ಅಧಿಕಾರಿಗಳು ಜಡ್ಜ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಮನವಿ ಮಾಡಿದ್ದರು. ಇದೀಗ ಜಡ್ಜ್ ತರುಣ್ ರಾಜು ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐಆರ್ ಐ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ಆರೋಪಿ ತರುಣ್ ರಾಜುನನ್ನು ಐದು ದಿನಗಳ ಕಾಲ ಡಿಆರ್ ಐ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿತ್ತು, ಉದ್ಯಮಿಯ ಪುತ್ರನಾಗಿರುವ ತರುಣ್ ರಾಜು, ನಟಿ ರನ್ಯಾ ರಾವ್ ಸ್ನೇಹಿತನಾಗಿದ್ದು, ರನ್ಯಾ ರಾವ್ ಳಿಂದ ವಿದೇಶಗಳಿಂದ ಅಕ್ರಮವಾಗಿ ಚಿನ್ನ ತರಿಸುತ್ತಿದ್ದ ಎನ್ನಲಾಗಿದೆ. ತರುಣ್ ರಾಜುನನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯದ ಜಡ್ಜ್ ಮುಂದೆ ಅಧಿಕಾರಿಗಳು ಹಾಜರುಪಡಿಸಿದ್ದರು.