ಹೈದರಾಬಾದ್‌ನ ಮೂಸರಂಬಾಗ್ ಈಸ್ಟ್ ಪ್ರಶಾಂತ್ ನಗರದಲ್ಲಿ ವಿಚಿತ್ರ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಮೂಸರಂಬಾಗ್‌ನಲ್ಲಿ ಶೂ ಮತ್ತು ಚಪ್ಪಲಿ ಕಳ್ಳತನವಾಗಿದೆ.
ಮಾರ್ಚ್ 13ರ ಬೆಳಗಿನ ಜಾವ 3 ಗಂಟೆಗೆ ಮೈಕ್ರೋ ಹೆಲ್ತ್ ಸೇರಿದಂತೆ ನಾಲ್ಕು ಅಪಾರ್ಟ್‌ಮೆಂಟ್‌ಗಳನ್ನು ಗುರಿಯಾಗಿಸಿಕೊಂಡು ಕಳ್ಳರು ಮನೆಯ ಹೊರಗಿನ ಪಾದರಕ್ಷೆಗಳನ್ನು ಕದ್ದಿದ್ದಾರೆ.
ವಿಚಿತ್ರ ಅಂದರೆ ಈ ಕಳ್ಳತನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಮಹಿಳಾ ಸಬ್ ಇನ್ಸ್‌ಪೆಕ್ಟರ್ ಅವರ ಶೂ ಮತ್ತು ಚಪ್ಪಲಿಗಳನ್ನು ಸಹ ಕಳ್ಳತನ ಮಾಡಲಾಗಿದೆ. ಬೆಳಿಗ್ಗೆ ತಮ್ಮ ಪಾದರಕ್ಷೆಗಳು ಕಾಣೆಯಾಗಿರುವುದನ್ನು ಕಂಡು ನಿವಾಸಿಗಳು ಆಶ್ಚರ್ಯಚಕಿತರಾಗಿದ್ದಾರೆ. ಈ ಪ್ರದೇಶದಲ್ಲಿ ವಿಚಿತ್ರ ಕಳ್ಳತನಗಳ ಬಗ್ಗೆ ಆತಂಕ ಹೆಚ್ಚಾಗಿದೆ.
ಈ ಕಳ್ಳರು ಬರೀ ಸಾಮಾನ್ಯ ಜನರನ್ನಷ್ಟೇ ಅಲ್ಲ, ಪೊಲೀಸರನ್ನೂ ಬಿಟ್ಟಿಲ್ಲ. ಇಂತಹ ಕಳ್ಳರನ್ನ ಹಿಡಿಯೋದು ಪೊಲೀಸರಿಗೆ ಸವಾಲಾಗಿದೆ.
View this post on Instagram