ಬೆಂಗಳೂರು : ಬೆಂಗಳೂರಿನ ‘ನಮ್ಮ ಮೆಟ್ರೋ’ ರೈಲಿನಲ್ಲಿ ಹೋಳಿ ಆಚರಣೆಗೆ ನಿರ್ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೋಳಿ ಮುಗಿಯುವವರೆಗೂ ನಮ್ಮ ಮೆಟ್ರೋದಲ್ಲಿ ಬಣ್ಣಗಳ ಎರಚುವುದನ್ನು ನಿಷೇಧಿಸಲಾಗಿದೆ ಎಂದು ಬಿಎಂಆರ್’ಸಿಎಲ್ (BMRCL) ಪ್ರಕಟಣೆ ಹೊರಡಿಸಿದೆ. ಪ್ರಯಾಣಿಕರಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ ನಮ್ಮ ಮೆಟ್ರೋ ಮಹತ್ವದ ಪ್ರಕಟಣೆ ಹೊರಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಂಆರ್ ಸಿಎಲ್ ಒಗ್ಗಟ್ಟು, ಸಂತೋಷ ಮತ್ತು ವರ್ಣರಂಜಿತ ನೆನಪುಗಳ ಪ್ರಯಾಣದೊಂದಿಗೆ ಈ ಹೋಳಿ ಹಬ್ಬವನ್ನು ಆಚರಿಸೋಣ. #ಬಿಎಂಆರಸಿಎಲ್ ನಿಮಗೆ ಸುರಕ್ಷಿತ ಮತ್ತು ವರ್ಣರಂಜಿತ ಹೋಳಿಯನ್ನು ಹಾರೈಸುತ್ತದೆ! #ಹೋಳಿಶುಭಾಶಯಗಳು ಎಂದು ಟ್ವೀಟ್ ಮಾಡಿದೆ.
ಒಗ್ಗಟ್ಟು, ಸಂತೋಷ ಮತ್ತು ವರ್ಣರಂಜಿತ ನೆನಪುಗಳ ಪ್ರಯಾಣದೊಂದಿಗೆ ಈ ಹೋಳಿ ಹಬ್ಬವನ್ನು ಆಚರಿಸೋಣ. #ಬಿಎಂಆರಸಿಎಲ್ ನಿಮಗೆ ಸುರಕ್ಷಿತ ಮತ್ತು ವರ್ಣರಂಜಿತ ಹೋಳಿಯನ್ನು ಹಾರೈಸುತ್ತದೆ! #ಹೋಳಿಶುಭಾಶಯಗಳು#ನಮ್ಮಮೆಟ್ರೋ pic.twitter.com/zbhZCCUynw
— ನಮ್ಮ ಮೆಟ್ರೋ (@OfficialBMRCL) March 14, 2025