ಹಾಸನ : ಹಾಸನದಲ್ಲಿ ಕಟ್ಟಡ ಕುಸಿದು ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ 3 ಕ್ಕೇರಿಕೆಯಾಗಿದೆ.
ಹಾಸನ ಜಿಲ್ಲೆ ಬೇಲೂರಿನಲ್ಲಿ ಹಳೆ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದರು. ನಜೀರ್ ಮತ್ತು ಅಮರನಾಥ್ ಮೃತಪಟ್ಟಿದ್ದರು. ಕಟ್ಟಡದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಮಹಿಳೆ ಜ್ಯೋತಿ (45) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 3 ಕ್ಕೇರಿಕೆಯಾಗಿದೆ.
ಬೇಲೂರಿನ ಚನ್ನಕೇಶವ ದೇವಾಲಯ ರಸ್ತೆಯ ಸಮೀಪ ಘಟನೆ ನಡೆದಿದ್ದು, ಹಳೆ ಕಟ್ಟಡದ ಕೆಳಗೆ ವ್ಯಾಪಾರ ಮಾಡುತ್ತಿದ್ದವರ ಮೇಲೆ ಸಜ್ಜಾ ಕುಸಿದು ಬಿದ್ದಿದೆ. ಬೇಲೂರು ಬಸ್ ನಿಲ್ದಾಣದ ಎದುರು ಘಟನೆ ನಡೆದಿದೆ. ಸತ್ಯನಾರಾಯಣ ಎಂಬುವರಿಗೆ ಸೇರಿದ ಕಟ್ಟಡ ಇದಾಗಿದೆ.