
ಚೆನ್ನೈ: ವೈದ್ಯ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಶವವಾಗಿ ಪತ್ತೆಯಾಗಿರುವ ಘಟನೆ ತಮಿಳುನಾಡಿನ ಚನ್ನೈನ ತಿರುಮಂಗಲ ಪ್ರದೇಶದಲ್ಲಿ ನಡೆದಿದೆ.
ಡಾ.ಬಾಲಮುರುಗನ್ (52), ಪತ್ನಿ ಸುಮತಿ (47) ಹಾಗೂ 19 ಹಾಗೂ 17 ವರ್ಷದ ಇಬ್ಬರು ಪುತ್ರರು ತಿರುಮಂಗಲಂ ಪ್ರದೇಶದಲಿರುವ ತಮ್ಮ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ.
ಬೆಳಿಗ್ಗೆ ಎಷ್ಟು ಹೊತ್ತಾದರೂ ಮನೆಯ ಬಾಗಿಲು ತೆರೆದಿರಲಿಲ್ಲ. ಪಕ್ಕದ ಮನೆಯವರು ಮನೆಬಳಿ ಬಂದು ನೋಡಿದರೆ ಬಾಗಿಲು ಒಳಗಡೆ ಲಾಕ್ ಆಗಿದೆ. ಮನೆಯೊಳಗಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆರೆದು ಒಳ ಪ್ರವೇಶಿಸಿದಾಗ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಡಾ.ಬಾಲಮುರುಗನ್ ಕುಟುಂಬ ಸುಮಾರು 5 ಕೋಟಿಯಷ್ಟು ಸಾಲದ ಸುಳಿಗೆ ಸಿಲುಕಿಕೊಂಡಿತ್ತು ಎನ್ನಲಾಗಿದೆ. ಸಾಲದ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.