
ಮೈಸೂರು: ವರದಕ್ಷಿಣೆಗಾಗಿ ಪತಿ ಮತ್ತು ಆತನ ಮನೆಯವರ ಕಿರುಕುಳದಿಂದ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಸಿಂಡೇನಹಳ್ಳಿಯಲ್ಲಿ ನಡೆದಿದೆ.
ನೇಣು ಬಿಗಿದುಕೊಂಡು 25 ವರ್ಷದ ರೇಷ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿದಿನ ಕುಡಿದು ಬಂದು ಪತಿ ಶ್ರೀನಿವಾಸ್ ಜಗಳವಾಡುತ್ತಿದ್ದ. ಆರು ವರ್ಷಗಳ ಹಿಂದೆ ಶ್ರೀನಿವಾಸನ ಜೊತೆಗೆ ರೇಷ್ಮಾ ಮದುವೆಯಾಗಿತ್ತು.
ಈರಯ್ಯನ ಕೊಪ್ಪಲು ನಿವಾಸಿ ಚಂದ್ರೇಗೌಡ, ಶಾಂತಮ್ಮ ದಂಪತಿಯ ಪುತ್ರಿ ರೇಷ್ಮಾ ಸಾವಿಗೆ ಪತಿ ಶ್ರೀನಿವಾಸ್ ಮತ್ತು ಆತನ ಸಹೋದರ ಶ್ರೀಧರ್, ಮಾವ ಮಾದೇಗೌಡ, ಅತ್ತೆ ಸರಸಮ್ಮ ಕಾರಣ ಎಂದು ಆರೋಪಿಸಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.