
ಇಸ್ಲಾಮಾಬಾದ್: ಪಾಕಿಸ್ತಾನ ರೈಲ್ವೆ ನಿರ್ವಹಿಸುವ ಪ್ಯಾಸೆಂಜರ್ ರೈಲನ್ನು ಅಪಹರಿಸಿ ಬಲೂಚಿಸ್ತಾನದಲ್ಲಿ ಎಲ್ಲಾ 214 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಉಗ್ರಗಾಮಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ(ಬಿಎಲ್ಎ) ಮಂಗಳವಾರ ಹೊಣೆ ಹೊತ್ತುಕೊಂಡಿದೆ.
ರೈಲಿನ ನಿಯಂತ್ರಣವನ್ನು ತಾವು ತೆಗೆದುಕೊಂಡಿದ್ದೇವೆ ಎಂದು ಉಗ್ರಗಾಮಿ ಗುಂಪು ಹೇಳಿಕೆ ನೀಡಿದ್ದು, 30 ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 214 ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂದು ಹೇಳಿದೆ. ಆದಾಗ್ಯೂ, ಬಲೂಚಿಸ್ತಾನ್ ಪೊಲೀಸರು ಬಿಎಲ್ಎ ಮಾಡಿದ ಹೇಳಿಕೆಗಳನ್ನು ತಿರಸ್ಕರಿಸಿದ್ದಾರೆ.
ತನ್ನ ಯೋಜಿತ ಮಿಲಿಟರಿ ತಂತ್ರ ಮತ್ತು ಆಕ್ರಮಣಕಾರಿ ಮುನ್ನಡೆಗಳು ಪಾಕ್ ಪಡೆಗಳನ್ನು ಹಿಮ್ಮೆಟ್ಟುವಂತೆ ಮಾಡಿದೆ. ಇದಲ್ಲದೆ, ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಕ್ಕೆ ಪ್ರತಿಯಾಗಿ ಎಲ್ಲಾ ಬಲೂಚ್ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲು BLA ಪಾಕಿಸ್ತಾನಕ್ಕೆ 48 ಗಂಟೆಗಳ ಅಂತಿಮ ಗಡುವು ನೀಡಿದೆ.