
ಬೆಂಗಳೂರು: 2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಲಾಗಿದೆ.
‘ಪಿಂಪಿ ಎಲ್ಲಿ’ ಮೊದಲ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ.
‘ವರ್ಣ ಪಟಲ’ ಎರಡನೇ ಅತ್ಯುತ್ತಮ ಚಿತ್ರ, ‘ಹರಿಯುವ ನದಿಗೆ ಮೈಯೆಲ್ಲಾ ಕಾಲು’ 3ನೇ ಅತ್ಯುತ್ತಮ ಚಿತ್ರವಾಗಿ ಆಯ್ಕೆ ಮಾಡಲಾಗಿದೆ.
‘ಈ ಮಣ್ಣು’ ಹಾಗೂ ‘ಗಿಳಿಯು ಪಂಜರದೊಳಿಲ್ಲ’ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರವಾಗಿ ಆಯ್ಕೆಯಾಗಿವೆ.
‘ಫೋರ್ ವಾಲ್ಸ್’ ಅತ್ಯುತ್ತಮ ಜನಪ್ರಿಯ ಮನರಂಜನ ಚಿತ್ರವಾಗಿ ಆಯ್ಕೆಯಾಗಿದೆ.
‘ಜಂಟಲ್ ಮ್ಯಾನ್’ ಸಿನಿಮಾದ ಅಭಿನಯಕ್ಕಾಗಿ ಪ್ರಜ್ವಲ್ ದೇವರಾಜ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ.
ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.
ಕೋವಿಡ್ ಕಾರಣದಿಂದ 2020ರಲ್ಲಿ ಕಡಿಮೆ ಸಿನಿಮಾಗಳು ಬಿಡುಗಡೆಯಾಗಿದ್ದು, ಪ್ರಶಸ್ತಿಗಾಗಿ 66 ಸಿನಿಮಾ ವೀಕ್ಷಿಸಲಾಗಿತ್ತು.
ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.