
ಚೆನ್ನೈ: ಖ್ಯಾತ ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ವಿರುದ್ಧ ಚೆನ್ನೈ ಪೋಲಿಸ್ ಆಯುಕ್ತರ ಕಚೇರಿಯಲ್ಲಿ ತಮಿಳುನಾಡು ಸುನ್ನತ್ ಜಮಾತ್ ದೂರು ದಾಖಲಿಸಿದೆ.
ಶುಕ್ರವಾರ ಚೆನ್ನೈನಲ್ಲಿ ನಟ ವಿಜಯ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಮುಸ್ಲಿಮರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ತಮಿಳು ವೆಟ್ರಿ ಕಳಗಂ ಪಕ್ಷ ಸ್ಥಾಪಿಸಿರುವ ವಿಜಯ್ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಚೆನ್ನೈನ ರಾಯಪೆಟ್ಟ ವೈಎಂಸಿಎ ಮೈದಾನದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಮುಸ್ಲಿಮರನ್ನು ಅವಮಾನಿಸಲಾಗಿದೆ. ವಿಜಯ್ ಅವರ ಅಂಗರಕ್ಷಕರು ಸಮಾರಂಭದಲ್ಲಿ ಭಾಗವಹಿಸಿದ್ದ ಮುಸ್ಲಿಮರನ್ನು ತಳ್ಳಿದ್ದಾರೆ. ಅವರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸರಿಯಾಗಿ ಕಾರ್ಯಕ್ರಮ ಆಯೋಜಿಸಿರಲಿಲ್ಲ. ಉಪವಾಸ ಮತ್ತು ಇಫ್ತಾರ್ ಧಾರ್ಮಿಕ ಮಹತ್ವ ತಿಳಿಯದ ಅನೇಕರು ಭಾಗವಹಿಸಿ ಗೊಂದಲ ಉಂಟು ಮಾಡಿದರು. ಇದು ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಸುನ್ನತ್ ಜಮಾತ್ ಖಜಾಂಚಿ ಸೈಯದ್ ಗೌಸ್ ದೂರು ದಾಖಲಿಸಿದ್ದಾರೆ.