ಇಂಡಿಯಾ ಯಮಹಾ ಮೋಟರ್ (ಐವೈಎಂ) ಕಂಪನಿಯು ತನ್ನ ಮೊದಲ ಹೈಬ್ರಿಡ್ ಮೋಟಾರ್ ಸೈಕಲ್ ‘2025 ‘FZ-S Fi Hybrid’ ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ ನ ಬೆಲೆ ರೂ. 1,44,800. (ದೆಹಲಿ, ಎಕ್ಸ್ ಶೋರೂಂ)
2025 ‘FZ-S Fi Hybrid’ ಸೊಗಸಾದ ಮತ್ತು ಸಮತೋಲಿತ ವಿನ್ಯಾಸವನ್ನು ಹೊಂದಿದೆ. ಟ್ಯಾಂಕ್ ಕವರ್ ನಲ್ಲಿಶಾರ್ಪ್ ಎಡ್ಜ್ ಗಳಿದ್ದು, ಲುಕ್ ಅನ್ನು ಮತ್ತಷ್ಟು ಉತ್ತಮಗೊಳಿಸಿದೆ. ಮುಂಭಾಗದ ಏರ್ ಇಂಟೇಕ್ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಟರ್ನ್ ಸಿಗ್ನಲ್ ಗಳು ಈ ಮೋಟಾರ್ ಸೈಕಲ್ ಗೆ ಮತ್ತಷ್ಟು ಆಕರ್ಷಕ ಮತ್ತು ಏರೋಡೈನಾಮಿಕ್ ರೂಪವನ್ನು ಒದಗಿಸಿದೆ.
ಈ ಮೋಟಾರ್ ಸೈಕಲ್ 149 ಸಿಸಿ ಬ್ಲೂ ಕೋರ್ ಎಂಜಿನ್ ನಿಂದ ಚಾಲಿತವಾಗಿದ್ದು, ಇದು ಓಬಿಡಿ- 2ಬಿ ಮಾನದಂಡಗಳನ್ನು ಪೂರೈಸುತ್ತದೆ. ಯಮಹಾದ ಸ್ಮಾರ್ಟ್ ಮೋಟಾರ್ ಜನರೇಟರ್ (ಎಸ್ಎಂಜಿ) ಮತ್ತು ಸ್ಟಾಪ್ & ಸ್ಟಾರ್ಟ್ ಸಿಸ್ಟಮ್ (ಎಸ್ಎಸ್ಎಶ್) ತಂತ್ರಜ್ಞಾನಗಳಿಂದ ಶಬ್ದವಿಲ್ಲದೆ ಮೋಟಾರ್ ಸೈಕಲ್ ಸ್ಟಾರ್ಟ್ ಮಾಡಬಹುದಾಗಿದೆ, ಬ್ಯಾಟರಿ ಸಹಾಯದಿಂದ ಆಕ್ಸಲರೇಷನ್ ಪಡೆಯಬಹುದಾಗಿದೆ ಮತ್ತು ಇಂಧನ ದಕ್ಷತೆ ಉತ್ತಮಗೊಂಡಿದೆ. ಬೈಕ್ ಒಮ್ಮೆ ನಿಂತಾಗ ಎಂಜಿನ್ ಸ್ವಯಂಚಾಲಿತವಾಗಿ ಆಫ್ ಆಗಿ, ಕ್ಲಚ್ ಒತ್ತಿದಾಗ ತಕ್ಷಣ ಮತ್ತೆ ಆರಂಭವಾಗುತ್ತದೆ.
ಮೋಟಾರ್ ಸೈಕಲ್ ರೈಡರ್ ಗಳ ಅನುಕೂಲತೆಗಾಗಿ ಈ ಹೊಸ ಬೈಕ್‌ನಲ್ಲಿ 4.2 ಇಂಚಿನ ಬಣ್ಣದ ಟಿ ಎಫ್ ಟಿ ಡಿಸ್‌ಪ್ಲೇ ಒದಗಿಸಲಾಗಿದೆ. ಇದು ವೈ-ಕನೆಕ್ಟ್ ಆಪ್ ಮೂಲಕ ಸ್ಮಾರ್ಟ್ ಫೋನ್‌ಗೆ ಸಂಪರ್ಕಗೊಳ್ಳುತ್ತದೆ. ಗೂಗಲ್ ಮ್ಯಾಪ್ ಜೊತೆಗೆ ಜೋಡಿಸಲಾಗಿರುವ ಟರ್ನ್-ಬೈ-ಟರ್ನ್ (ಟಿಬಿಟಿ) ನ್ಯಾವಿಗೇಷನ್ ಸೌಲಭ್ಯವನ್ನು ಹೊಂದಿದ್ದು, ಇದು ರಸ್ತೆಯ ದಾರಿ, ದಿಕ್ಕುಗಳು ಮತ್ತು ಸಣ್ಣ ಸಣ್ಣ ತಿರುವುಗಳ ವಿವರಗಳನ್ನು ತೋರಿಸುತ್ತದೆ. ಸವಾರರಿಗೆ ತೊಂದರೆ ಮುಕ್ತ ರೈಡಿಂಗ್ ಅನುಭವವನ್ನು ಒದಗಿಸುತ್ತದೆ.
ಆರಾಮದಾಯಕವಾಗಿ ಲಾಂಗ್ ರೈಡ್ ಹೋಗುವಂತೆ ಆಗಲು ಸೂಕ್ತ ರೀತಿಯಲ್ಲಿ ಹ್ಯಾಂಡಲ್ ಬಾರ್ ಸ್ಥಾನವನ್ನು ಸರಿಪಡಿಸಲಾಗಿದೆ. ಗ್ಲೌಸ್ ಧರಿಸಿದಾಗಲೂ ಬಳಸಲು ಸುಲಭವಾಗುವಂತೆ ಹ್ಯಾಂಡಲ್ ಬಾರ್ ನ ಸ್ವಿಚ್ ಗಳನ್ನು ಅನುಕೂಲಕರವಾದ ಉತ್ತಮ ಸ್ಥಾನದಲ್ಲಿ ಅಳವಡಿಸಲಾಗಿದೆ. ಹಾರ್ನ್ ಸ್ವಿಚ್ ಕೂಡ ಆರಾಮದಾಯಕವಾಗಿ ಬಳಸಲು ಅನುವಾಗುವಂತೆ ಮರುವಿನ್ಯಾಸಗೊಳಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಂಧನ ಟ್ಯಾಂಕ್ ಗೆ ಏರ್ ಪ್ಲೇನ್ ಶೈಲಿಯ ಕ್ಯಾಪ್ ಇದ್ದು, ಪೆಟ್ರೋಲ್ ತುಂಬುವಾಗಲೂ ಅದು ಅಟ್ಯಾಚ್ ಆಗಿಯೇ ಇರುತ್ತದೆ. ಅನುಕೂಲತೆಯನ್ನು ಹೆಚ್ಚಿಸುತ್ತದೆ. ಹೊಚ್ಚ ಹೊಸ 2025 ‘2025 ‘FZ-S Fi Hybrid’’ ಮೋಟಾರ್ ಸೈಕಲ್ ರೇಸಿಂಗ್ ಬ್ಲೂ ಮತ್ತು ಸಯಾನ್ ಮೆಟಾಲಿಕ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.