
ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಉಸ್ಮಾನಿಯಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಂದ್ರಶೇಖರ್ ರೆಡ್ಡಿ (40) ಹಾಗೂ ಪತ್ನಿ ಕವಿತಾ ರೆಡ್ಡಿ (35) ಆತ್ಮಹತ್ಯೆಗೆ ಶರಣದಾ ದಂಪತಿ. ಮಕ್ಕಳಾದ ಶ್ರೀತಾ ರೆಡ್ಡಿ (13) ಮತ್ತು ವಿಶ್ವಂತ್ ರೆಡ್ಡಿ (10)ಗೆ ವಿಷವುಣಿಸಿ ಕೊಲೆಗೈದು ಬಳಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಂದ್ರಶೇಖರ್ ರೆಡ್ಡಿ, ನಾಗರ ಕುರ್ನೂಲ್ ಜಿಲ್ಲೆಯ ಕಲ್ವಕುರ್ತಿ ಮಂಡಲದವರು ಎಂದು ತಿಳಿದುಬಂದಿದೆ. 6 ತಿಂಗಳಿಂದ ಕೆಲಸವಿಲ್ಲದೇ ಕುಟುಂಬ ತೀವ್ರವಾಗಿ ಆರ್ಥಿಕ ಸಂಕಷ್ಟದಲ್ಲಿತ್ತು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.