ಬೆಂಗಳೂರು : ನಟಿ ರಶ್ಮಿಕಾ ಮಂದಣ್ಣಗೆ ಸೂಕ್ತ ಭದ್ರತೆ ನೀಡಿ ಎಂದು ಕೊಡವ ನ್ಯಾಷನಲ್ ಸಂಘಟನೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರದ ಮೂಲಕ ಮನವಿ ಮಾಡಿದೆ.
ನಟಿ ರಶ್ಮಿಕಾ ಮಂದಣ್ಣಗೆ ಪಾಠ ಕಲಿಸಬೇಕು ಎಂಬ ಶಾಸಕ ರವಿ ಗಾಣಿಗ ಹೇಳಿಕೆ ತೀವ್ರ ವಿವಾದದ ಸ್ವರೂಪ ಪಡೆದಿದೆ. ಈ ಬೆನ್ನಲ್ಲೇ ಕೊಡವ ಸಮುದಾಯ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಅವರ ಹೇಳಿಕೆಯಿಂದ ರಶ್ಮಿಕಾ ಭದ್ರತೆಯ ವಿಚಾರದಲ್ಲಿ ಆತಂಕ ಮೂಡಿಸಿದೆ. ಹಾಗಾಗಿ ಆಕೆಗೆ ಅಗತ್ಯ ರಕ್ಷಣೆ ನೀಡಬೇಕು ಎಂದು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ನಾನು ಹೈದರಾಬಾದ್ ನವಳು ಎಂದಿದ್ದ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಕಿಡಿಕಾರಿದ್ದರು.ಬೆಂಗಳೂರಿನಲ್ಲಿ ಮಾತನಾಡಿದ ಕರವೇ ನಾರಾಯಣ ಗೌಡ, ನಟಿ ರಶ್ಮಿಕಾ ಮಂದಣ್ಣ ಕನ್ನಡಿದಂದ ಹೋಗಿ ಈಗ ಬೇರೆ ಭಾಷೆಯ ಸಿನಿಮಾ ಮಾಡುತ್ತಿದ್ದಾರೆ. ಕೊಡಗಿನ ರಶ್ಮಿಕಾ ಅಪ್ಪಟ ಕನ್ನಡದ ಹೆಣ್ಣುಮಗಳು. ಆಂಧ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದನ್ನು ನೋಡಿದ್ದೇನೆ. ನಾನು ತೆಲುಗಿನ ಆಂಧ್ರಪ್ರದೇಶದವರು ಎಂದಿದ್ದಾರೆ. ಕನ್ನಡದವರಾಗಿ ಕನ್ನಡ ನಾಡನ್ನೇ ಮರೆತರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.ನೀವು ಚಿಗುರಿದಷ್ಟು ಬೇರೆ ಭಾಷೆಗಳಲ್ಲಿ ಅವಕಾಶ ಸಿಕ್ಕಿದೆ. ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುತ್ತಿದ್ದೀರಿ ಎಂದು ಕನ್ನಡ ನಾಡನ್ನೇ ಮರೆತರೆ ನೀವೆಂತಹ ಮೀರ್ ಸಾಧಿಕ್ ಇರಬೇಕು ಎನ್ನಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದರು.