
ಬೆಂಗಳೂರು: ಅಕ್ರಮ ಚಿನ್ನ ಸಾಗಾಣೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ನಟಿ ರನ್ಯಾ ರಾವ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ರನ್ಯಾ ರಾವ್ ಒಡೆದತನ ಕಂಪನಿಗೆ ಸರ್ಕಾರದಿಂದಲೇ ಭೂಮಿ ಮಂಜೂರಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ರನ್ಯಾ ರಾವ್ ನಿರ್ದೇಶಕಿಯಾಗಿರುವ ಕ್ಸಿರೋದಾ ಇಂಡಿಯಾ ಪ್ರೈ.ಲಿ. ಕಂಪನಿಗೆ ಬರೋಬ್ಬರಿ 12 ಎಕರೆ ಜಮೀನನ್ನು ಕೆಐಎಡಿಬಿಯಿಂದ ಮಂಜೂರಾಗಿದೆ. ತುಮಕೂರಿನ ಶಿರಾ ಬಳಿ ಕ್ಸಿರೋದಾ ಕಂಪನಿ ಇದ್ದು, ಈ ಕಂಪನಿ 2022ರ ಏಪ್ರಿಲ್ ನಲ್ಲಿ ಸ್ಥಾಪನೆಯಾಗಿದೆ.
2023ರ ಜನವರಿಯಲ್ಲಿ ಈ ಕಂಪನಿಗೆ ಕೆಐಎಡಿಬಿಯಿಂದ 12 ಎಕರೆ ಭೂಮಿ ಮಂಜೂರಾಗಿದೆ. ಕಂಪನಿ ಸ್ಥಾಪನೆಯಾಗಿ ಕೇವಲ ಒಂಭತ್ತು ತಿಂಗಳಲ್ಲಿಯೇ ಬರೋಬ್ಬರಿ 12 ಎಕರೆ ಜಮೀನು ಸರ್ಕಾರದಿಂದಲೇ ಮಂಜೂರಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಇದರ ಹಿಂದೆ ಪ್ರಭಾವಿ ರಾಜಕಾರಣಿಗಳ ಕೈವಾಡವೂ ಇರುವ ಶಂಕೆ ವ್ಯಕ್ತವಾಗಿದೆ.