alex Certify ರೈಲು ಡಿಕ್ಕಿ ಹೊಡೆದರೂ ಪವಾಡ ಸದೃಶವಾಗಿ ಪಾರಾದ ಮದ್ಯದ ಅಮಲಲ್ಲಿ ಹಳಿ ಮೇಲೆ ಮಲಗಿದ್ದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಡಿಕ್ಕಿ ಹೊಡೆದರೂ ಪವಾಡ ಸದೃಶವಾಗಿ ಪಾರಾದ ಮದ್ಯದ ಅಮಲಲ್ಲಿ ಹಳಿ ಮೇಲೆ ಮಲಗಿದ್ದ ಭೂಪ

ಪೆರುವಿನಲ್ಲಿ ಹಳಿಯಲ್ಲಿ ಮಲಗಿದ್ದ ಕುಡುಕನೊಬ್ಬ ರೈಲು ಡಿಕ್ಕಿ ಹೊಡೆದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಶನಿವಾರ ಪೆರುವಿನಲ್ಲಿ ರೈಲು ಹಳಿಗಳ ಬಳಿ ಮಲಗಿದ್ದಾಗ ಸರಕು ರೈಲು ಡಿಕ್ಕಿ ಹೊಡೆದ ನಂತರ ಕುಡುಕ ವ್ಯಕ್ತಿಯೊಬ್ಬ ಹೇಗೋ ಬದುಕುಳಿದಿದ್ದಾನೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಅವನಿಗೆ ಡಿಕ್ಕಿ ಹೊಡೆದಿದೆ. ಆದರೆ, ಯಾವುದೋ ಪವಾಡದ ನಡೆದಂತಿದೆ. ಅವನು ಪಾರಾಗಿದ್ದಾನೆ ಎಂದು ಲಿಮಾ ಪ್ರಾಂತ್ಯದ ಅಟೆ ಪಟ್ಟಣದ ಭದ್ರತಾ ಅಧಿಕಾರಿ ಜನರಲ್ ಜೇವಿಯರ್ ಅವಲೋಸ್ ತಿಳಿಸಿದ್ದಾರೆ.

ಅವನು ಸ್ಪಷ್ಟವಾಗಿ ಮಾದಕ ಸ್ಥಿತಿಯಲ್ಲಿದ್ದ, ರೈಲು ಹಳಿಗಳ ಮೇಲೆ ನಿದ್ರಿಸಿದ್ದಾನೆ. ರೈಲು ಬರುತ್ತಿರುವುದನ್ನು ಗಮನಿಸಿರಲಿಲ್ಲ. ರೈಲು ಪೆರುವಿಯನ್ ಆಂಡಿಸ್ ಕಡೆಗೆ ತೆರಳುತ್ತಿತ್ತು. 28 ವರ್ಷದ ಜುವಾನ್ ಕಾರ್ಲೋಸ್ ಟೆಲ್ಲೊಗೆ ಡಿಕ್ಕಿ ಹೊಡೆದು ನಿಂತಿದೆ ಎಂದು ಅವರು ಹೇಳಿದರು.

ಬಿಡುಗಡೆ ಮಾಡಿದ ಕಣ್ಗಾವಲು ದೃಶ್ಯಗಳಲ್ಲಿ ಇಂಜಿನ್ ಯುವಕನನ್ನು ಹಲವಾರು ಗಜಗಳಷ್ಟು(ಮೀಟರ್) ಎಳೆದುಕೊಂಡು ಹೋಗುವುದನ್ನು ತೋರಿಸುತ್ತದೆ. ಅವನ ಎಡಗೈಗೆ ಸಣ್ಣಪುಟ್ಟ ಗಾಯಗಳು ಮಾತ್ರ ಆಗಿವೆ ಎಂದು ಅವಲೋಸ್ ಹೇಳಿದರು.

ಈ ರೈಲು ಮಾರ್ಗದಲ್ಲಿ ಅಪಘಾತಗಳು ಸಾಮಾನ್ಯವಾಗಿವೆ. ಆಗಸ್ಟ್ 2024 ರಲ್ಲಿ, ಹೆಡ್‌ಫೋನ್‌ಗಳನ್ನು ಧರಿಸಿದ್ದ ಯುವಕನೊಬ್ಬ ಹಳಿಗಳನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಸರಕು ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...