alex Certify BREAKING: ಅಂತರಿಕ್ಷದಲ್ಲಿ 9 ತಿಂಗಳಿಂದ ತ್ರಿಶಂಕು ಸ್ಥಿತಿಗೆ ಸಿಲುಕಿದ್ದ ಸುನಿತಾ ವಿಲಿಯಮ್ಸ್ ಕೊನೆಗೂ ಭೂಮಿಗೆ ಬರಲು ಮುಹೂರ್ತ ಫಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಅಂತರಿಕ್ಷದಲ್ಲಿ 9 ತಿಂಗಳಿಂದ ತ್ರಿಶಂಕು ಸ್ಥಿತಿಗೆ ಸಿಲುಕಿದ್ದ ಸುನಿತಾ ವಿಲಿಯಮ್ಸ್ ಕೊನೆಗೂ ಭೂಮಿಗೆ ಬರಲು ಮುಹೂರ್ತ ಫಿಕ್ಸ್

ವಾಷಿಂಗ್ಟನ್: ಕಳೆದ 9 ತಿಂಗಳಿಂದ ಅಂತರಿಕ್ಷದಲ್ಲಿ ತ್ರಿಶಂಕು ಸ್ಥಿತಿಗೆ ಸಿಲುಕಿದ್ದ ನಾಸಾ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬೆರ್ರಿ ವಿಲ್ ಮೋರ್ ಅವರು ಕೊನೆಗೂ ಭೂಮಿಗೆ ಮರಳಲಿದ್ದಾರೆ.

ಮಾರ್ಚ್ 16ರಂದು ಅವರು ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಶನಿವಾರ ಅಧಿಕೃತವಾಗಿ ಈ ವಿಷಯ ಪ್ರಕಟಿಸಿದೆ.

ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಡ್ರಾಗನ್ ಗಗನ ನೌಕೆಯು ಪರ್ಯಾಯ ಗಗನಯಾನಿಗಳೊಂದಿಗೆ ಮುಂದಿನ ವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲಿದ್ದು, ಅಲ್ಲಿಂದ ಸುನಿತಾ ವಿಲಿಯಮ್ಸ್ ಮತ್ತು ವಿಲ್ ಮೋರ್ ಅವರನ್ನು ಭೂಮಿಗೆ ಕರೆತರಲಾಗುವುದು.

10 ದಿನಗಳ ಅವಧಿಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಸುನಿತಾ ಮತತ್ಉ ವಿಲ್ ಮೋರ್ ಅವರು ತಾಂತ್ರಿಕ ಕಾರಣದಿಂದಾಗಿ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಅವರು ಕರೆತರುವ ಪ್ರಯತ್ನಗಳು ಕೈಗೂಡಿರಲಿಲ್ಲ. ಇದೀಗ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಲ್ಯಾಂಡಿಂಗ್ ದಿನಾಂಕವನ್ನು ಬಹಿರಂಗಪಡಿಸಿದೆ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಅಂತಿಮವಾಗಿ ಭೂಮಿಗೆ ಮರಳಲು ಸಜ್ಜಾಗುತ್ತಿದ್ದಾರೆ. ಆರಂಭದಲ್ಲಿ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ 10 ದಿನಗಳ ಕಾರ್ಯಾಚರಣೆಯನ್ನು ಕೈಗೊಂಡಿದ್ದ ಈ ಜೋಡಿ ಕಳೆದ ಒಂಬತ್ತು ತಿಂಗಳಿನಿಂದ ಸಿಲುಕಿಕೊಂಡಿದೆ. ಶುಕ್ರವಾರ, ಮುಂದಿನ ವಾರ ಸ್ಪೇಸ್‌ಎಕ್ಸ್ ಡ್ರ್ಯಾಗನ್‌ನಲ್ಲಿ ಉಡಾವಣೆ ಮಾಡಲು ಪರಿಹಾರ ಸಿಬ್ಬಂದಿಗೆ ನಾಸಾ ಅನುಮತಿ ನೀಡಿತು. ಮಾರ್ಚ್ 16 ರಂದು ಈ ಜೋಡಿ ಭೂಮಿಗೆ ಮರಳಲಿದೆ ಎಂದು ನಾಸಾ ಅಧಿಕಾರಿಗಳು ದೃಢಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...