
ಸೂರತ್: ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ಪಡೆಯ ಪೂರ್ವಾಭ್ಯಾಸ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ರಸ್ತೆಗೆ ಬಂದ ಬಾಲಕನ ಮೇಲೆ ಪೊಲೀಸ್ ಅಧಿಕಾರಿ ಹಲ್ಲೆ ಮಾಡಿದ್ದಾರೆ.
ಸೈಕಲ್ ತುಳಿದುಕೊಂಡು ಬರುತ್ತಿದ್ದ 17 ವರ್ಷದ ಬಾಲಕನ ಮೇಲೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಲ್ಲೆ ನಡೆಸಿದ್ದಾರೆ. ಈ ಘಟನೆ ಗುರುವಾರ ರತನ್ ಚೌಕ್‌ನಲ್ಲಿ ನಡೆದಿದೆ.
ಈ ವಿಡಿಯೋ ವೈರಲ್ ಆಗಿದೆ. ಬೆಂಗಾವಲು ಪಡೆಯು ಹಾದುಹೋಗುವಾಗ ಆ ಬಾಲಕ ತನ್ನ ಸೈಕಲ್ ನಲ್ಲಿ ಹೋಗುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಸ್ವಲ್ಪ ಸಮಯದ ನಂತರ, ಬಿ.ಎಸ್. ಗಧ್ವಿ ಎಂದು ಗುರುತಿಸಲಾದ ಪೊಲೀಸ್ ಬಾಲಕನ ಕೂದಲನ್ನು ಎಳೆದು ಕಪಾಳಮೋಕ್ಷ ಮಾಡಿದ್ದಾರೆ.
ಮನೆಯಿಂದ ಹೊರಗೆ ಹೋಗಿದ್ದ ಬಾಲಕ ರಾತ್ರಿ 9:30 ಕ್ಕೆ ಅಳುತ್ತಾ ಹಿಂತಿರುಗಿದ್ದಾನೆ. ಪ್ರಶ್ನಿಸಿದಾಗ ಪೊಲೀಸರು ಹೊಡೆದಿದ್ದಾರೆ ಎಂದು ಹೇಳಿದ್ದಾನೆ ಅವನ ಮೇಲೆ ಹಲ್ಲೆ ಮಾಡುವ ಬದಲು ತಿಳಿ ಹೇಳಬೇಕಿತ್ತು ಎಂದು ಬಾಲಕನ ಕುಟುಂಬದವರು ಹೇಳಿದ್ದು, ಪೊಲೀಸ್ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಕ್ರೋಶ ಹುಟ್ಟುಹಾಕಿತು. ಉಪ ಪೊಲೀಸ್ ಆಯುಕ್ತರಾದ(ಡಿಸಿಪಿ) ಅಮಿತಾ ವನಾನಿ ಅವರು ಗಾಧ್ವಿ ಅವರ ಕ್ರಮ ಖಂಡಿಸಿ, ಸಂಪೂರ್ಣವಾಗಿ ಅನುಚಿತ ವರ್ತನೆ ಎಂದು ಹೇಳಿದ್ದಾರೆ. ಮತ್ತು ವಿಷಾದ ವ್ಯಕ್ತಪಡಿಸಿದ್ದಾರೆ.
ಮೋರ್ಬಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಾಧ್ವಿ ಅವರನ್ನು ನಿಯಂತ್ರಣ ಕೊಠಡಿಗೆ ಮರು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ, ಅವರ ವೇತನ ಹೆಚ್ಚಳವನ್ನು ಒಂದು ವರ್ಷದವರೆಗೆ ಸ್ಥಗಿತಗೊಳಿಸಲಾಗಿದೆ.
Gujarat Police Beating Child During Rehearsal Of Prime Minister Modi’ Rally In Surat.pic.twitter.com/pbJ5NzTsK5 #Surat #GujaratPolice #NarendraModi #SuratPolice #Gujarat #ModinGujarat #WelcomeModiji
— 𝐁𝐫𝐢𝐣𝐞𝐬𝐡 𝐅𝐚𝐥𝐝𝐮 (@BrijeshFaldu1) March 6, 2025