
ಹಾವೇರಿ: ಕಾರ್ ಗ್ಲಾಸ್ ಒಡೆದು 33 ಲಕ್ಷ ರೂಪಾಯಿ ನಗದು ಕಳವು ಮಾಡಿ ಗ್ಯಾಂಗ್ ಪರಾರಿಯಾದ ಘಟನೆ ಹಾವೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೇವಲ 33 ಸೆಕೆಂಡ್ ನಲ್ಲಿ 33 ಲಕ್ಷ ರೂಪಾಯಿ ಎಗರಿಸಿ ಖತರ್ನಾಕ್ ಕಳ್ಳರು ಪರಾರಿಯಾಗಿದ್ದಾರೆ. ಸಂತೋಷ್ ಹಿರೇಮಠ ಎಂಬ ವ್ಯಕ್ತಿಗೆ ಸೇರಿದ 33 ಲಕ್ಷ ಕಳವು ಮಾಡಲಾಗಿದೆ. ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದರು.
ಸಂತೋಷ್ ಮನೆಯ ಮುಂಭಾಗ ನಿಂತಿದ್ದ ಕಾರ್ ಗಮನಿಸಿದ ನಾಲ್ವರು ಖದೀಮರು ಯಾರೂ ಇಲ್ಲದ ವೇಳೆ ಕಾರ್ ಗ್ಲಾಸ್ ಒಡೆದು ಕಾರ್ ಹಿಂಭಾಗದ ಸೀಟ್ ನಲ್ಲಿ ಇಟ್ಟಿದ್ದ 33 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. ಎರಡು ಬೈಕ್ ನಲ್ಲಿ ಬಂದಿದ್ದ ನಾಲ್ವರು ಕಳ್ಳರು ಕೃತ್ಯವೆಸಗಿದ್ದಾರೆ. ಹಣ ಕಳವು ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.