alex Certify ʼಮಹಿಳಾ ದಿನʼ ದಂದು ವೀಸಾ ಕೊಡುಗೆ: ಡಿಜಿಟಲ್ ಭದ್ರತೆ, ಪಾವತಿ ವ್ಯವಸ್ಥೆ ಬಗ್ಗೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಹಿಳಾ ದಿನʼ ದಂದು ವೀಸಾ ಕೊಡುಗೆ: ಡಿಜಿಟಲ್ ಭದ್ರತೆ, ಪಾವತಿ ವ್ಯವಸ್ಥೆ ಬಗ್ಗೆ ಮಾಹಿತಿ

ಪ್ರಸ್ತುತ ಹೆಚ್ಚು ಹೆಚ್ಚು ಮಹಿಳೆಯರು ಉದ್ಯಮಿಗಳಾಗುತ್ತಿದ್ದಾರೆ. ಉದ್ಯಮಿಗಳಾಗುವುದು ಮುಖ್ಯವಲ್ಲ. ಆ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ. ಅವರು ಮೊದಲ ತಮ್ಮ ಉದ್ಯಮ ಯೋಜನೆಯಲ್ಲಿ ಡಿಜಿಟಲ್ ಪೇಮೆಂಟ್ ಮತ್ತು ಭದ್ರತೆಯ ಕಡೆಗೆ ಗಮನ ಹರಿಸಬೇಕು. ಹಾಗಾಗಿ ಈ ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ʼವೀಸಾʼ ಸಂಸ್ಥೆಯು ಸುರಕ್ಷಿತ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಹೊಂದಲು ಮತ್ತು ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಲು ಮಹಿಳಾ ಉದ್ಯಮಿಗಳಿಗೆ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದೆ:

ಭದ್ರತೆ ಮೊದಲ ಆದ್ಯತೆಯಾಗಿರಲಿ: ಉದ್ಯೋಗಿಗಳಿಗೆ ಡಿಜಿಟಲ್ ವಿಚಾರದಲ್ಲಿ ಪಾಲಿಸಬೇಕಾದ ಉತ್ತಮ ಪದ್ಧತಿಗಳು ಮತ್ತು ಹೊಸ ರೀತಿಯ ಡಿಜಿಟಲ್ ವಂಚನೆಗಳ ಕುರಿತು ನಿಯಮಿತವಾಗಿ ತರಬೇತಿ ನೀಡಿ. ಉತ್ಪನ್ನ ಯೋಜನೆ ಮತ್ತು ಗ್ರಾಹಕ ಸೇವೆ ವಿಭಾಗದಲ್ಲಿ ಭದ್ರತೆಯನ್ನು ಮೊದಲ ಆದ್ಯತೆಯಾಗಿಟ್ಟುಕೊಳ್ಳಿ.

ಸುರಕ್ಷಿತವಾದ ಟ್ಯಾಪ್, ಪೇ ಮತ್ತು ಕ್ಲಿಕ್ ಪೇಮೆಂಟ್ ವ್ಯವಸ್ಥೆ ಬಳಸಿ: ನಿಮ್ಮ ಮಳಿಗೆಗಳಲ್ಲಿ ಸುರಕ್ಷಿತವಾದ ಮತ್ತು ವೇಗವಾದ ಪಾವತಿ ಸಾಧ್ಯವಾಗಲು ಇಎಂವಿಸಿಓ ® ಚಿಪ್ ಆಧಾರಿತ ಸಂಪರ್ಕ ರಹಿತ ಕಾರ್ಡ್‌ಗಳನ್ನು ಸ್ವೀಕರಿಸುವ ಮತ್ತು ಟೋಕನೈಸ್ಡ್ ಕಾರ್ಡ್ ಮೂಲಕ ಆನ್‌ ಲೈನ್‌ ನಲ್ಲಿ ಪಾವತಿ ಮಾಡಬಹುದಾದ ವ್ಯವಸ್ಥೆ ಅಳವಡಿಸಿಕೊಳ್ಳಿ. ಈ ವ್ಯವಸ್ಥೆಗಳು ಎನ್‌ಕ್ರಿಪ್ಶನ್ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಅವಲಂಬಿಸಿವೆ ಅನ್ನುವುದು ಗಮನಾರ್ಹ.

ಸುರಕ್ಷಿತ ಪಾವತಿ ವ್ಯವಸ್ಥೆಗಳನ್ನು ಬಳಸಿ: ಇಎಂವಿಸಿಓ® ಮತ್ತು ಪಿಸಿಐ ಡಿಎಸ್ಎಸ್ (ಪೇಮೆಂಟ್ ಕಾರ್ಡ್ ಇಂಡಸ್ಟ್ರಿ ಡೇಟಾ ಸೆಕ್ಯೂರಿಟಿ ಸ್ಟಾಂಡರ್ಡ್) ನಂತಹ ಉದ್ಯಮ ಮಾನದಂಡಗಳನ್ನು ಪಾಲಿಸುವ ವಿಶ್ವಾಸಾರ್ಹ ಪಾವತಿ ವ್ಯವಸ್ಥೆಗಳನ್ನು ಮಾತ್ರ ಅಳವಡಿಸಿಕೊಳ್ಳಿ. ಬಹು ಸೂಕ್ತವಾದ ಭದ್ರತೆ ಮತ್ತು ಎನ್‌ಕ್ರಿಪ್ಶನ್ ಹೊಂದಿರುತ್ತವೆ.

ಸಾಫ್ಟ್‌ ವೇರ್ ಮತ್ತು ಸಾಧನಗಳನ್ನು ನಿಯಮಿತವಾಗಿ ಅಪ್ ಡೇಟ್ ಮಾಡಿ: ಎಲ್ಲಾ ಸಾಧನಗಳು ಮತ್ತು ಸಾಫ್ಟ್‌ ವೇರ್‌ ಗಳನ್ನು ಇತ್ತೀಚಿನ ಹೊಸ ಆವೃತ್ತಿಗೆ ಅಪ್ ಡೇಟ್ ಮಾಡುವುದನ್ನು ಮರೆಯದಿರಿ. ಈ ಮೂಲಕ ಮಾಲ್‌ ವೇರ್, ಹ್ಯಾಕಿಂಗ್ ಪ್ರಯತ್ನಗಳು ಮತ್ತು ಡೇಟಾ ಕಳ್ಳತನ ಮುಂತಾದ ಸೈಬರ್ ಅಪಾಯಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ.

ಖಾತೆಯ ಮೇಲೆ ಸದಾ ನಿಗಾ ಇರಲಿ: ಬ್ಯಾಂಕಿಂಗ್ ಮತ್ತು ಆರ್ಥಿಕ ಆಪ್‌ ಗಳ ನೋಟಿಫಿಕೇಷನ್ ಗಳನ್ನು ಗಮನಿಸುತ್ತಲೇ ಇರಿ, ವಹಿವಾಟಿನಲ್ಲಿ ವಂಚನೆ ಉಂಟಾಗಬಹುದಾದ ಸಂದರ್ಭಗಳಲ್ಲಿ ಪರಿಶೀಲನೆ ನಡೆಸಿ.

ಈ ಸಲಹೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಮಹಿಳೆಯರು ಯಶಸ್ವಿ ಉದ್ಯಮವನ್ನು ನಡೆಸಬಹುದು. ಜೊತೆಗೆ ಉತ್ತಮ ರೀತಿಯಲ್ಲಿ ಉದ್ಯಮ ನಡೆಸುವ ಮೂಲಕ ಸ್ಫೂರ್ತಿಯಾಗಬಹುದು ಮತ್ತು ಸಮಾಜ ಅಭಿವೃದ್ಧಿ ಕಾರ್ಯ ಮಾಡಬಹುದು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...