ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯಲು ಜನರು ತಮ್ಮ ಜೀವವನ್ನೇ ಪಣಕ್ಕಿಡುತ್ತಿದ್ದಾರೆ. ಅಂತಹ ಒಂದು ಘಟನೆಯಲ್ಲಿ, ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಫತೇವಾಡಿ ಕಾಲುವೆಗೆ ಅವರ ಎಸ್‌ಯುವಿ ಬಿದ್ದ ನಂತರ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ, ಒಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ.
ವರದಿಗಳ ಪ್ರಕಾರ, ಮೂವರು ಯುವಕರು ರೀಲ್ಸ್ ಚಿತ್ರೀಕರಣಕ್ಕಾಗಿ ಸಾಹಸ ಮಾಡಲು ಕಾಲುವೆಯ ಬಳಿ ಹೋಗಿದ್ದರು. ಆದಾಗ್ಯೂ, ಎಸ್‌ಯುವಿ ಚಾಲನೆ ಮಾಡುತ್ತಿದ್ದ ಯುವಕ ವಾಹನದ ನಿಯಂತ್ರಣವನ್ನು ಕಳೆದುಕೊಂಡಿದ್ದು, ಅದು ಕಾಲುವೆಗೆ ಬಿದ್ದಿತು. ಬುಧವಾರ ಸಂಜೆ ನಡೆದ ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಲುವೆಯ ಬಳಿ ಯು-ಟರ್ನ್ ಮಾಡಲು ಪ್ರಯತ್ನಿಸುವಾಗ ಚಾಲಕ ನಿಯಂತ್ರಣ ಕಳೆದುಕೊಂಡು ವಾಹನ ಕಾಲುವೆಗೆ ಬಿದ್ದಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಎಸ್‌ಯುವಿ ನೀರಿನಲ್ಲಿ ಬಿದ್ದಾಗ ಒಬ್ಬ ವ್ಯಕ್ತಿ ಕಾಲುವೆಯ ಬಳಿ ನಿಂತಿರುವುದು ಕೂಡ ಕಂಡುಬಂದಿದೆ. ಮಾಹಿತಿ ಪಡೆದ ನಂತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.
ಘಟನೆಯಲ್ಲಿ ಮೃತಪಟ್ಟ ಇಬ್ಬರು ಯುವಕರನ್ನು ಯಶ್ ಸೋಲಂಕಿ ಮತ್ತು ಯಕ್ಷ್ ಭಂಕೋಡಿಯಾ ಎಂದು ಗುರುತಿಸಲಾಗಿದೆ. ನಾಪತ್ತೆಯಾದ ಯುವಕನನ್ನು ಕ್ರಿಶ್ ದೇವ್ ಎಂದು ಗುರುತಿಸಲಾಗಿದೆ. ಈ ಘಟನೆ ವಾಸನಾ ಬ್ಯಾರೇಜ್ ಬಳಿ ನಡೆದಿದೆ.
ʼಟೈಮ್ಸ್ ಆಫ್ ಇಂಡಿಯಾʼ ವರದಿಯ ಪ್ರಕಾರ, ಸ್ಥಳದಲ್ಲಿ ಹಾಜರಿದ್ದ ಮೂವರು ಯುವಕರ ಸ್ನೇಹಿತರು ಅವರನ್ನು ರಕ್ಷಿಸಲು ನೀರಿನಲ್ಲಿ ಹಗ್ಗವನ್ನು ಎಸೆದರು. ಘಟನೆ ನಡೆದಾಗ ದೇವ್ ಚಾಲಕನ ಸೀಟಿನ ಪಕ್ಕದಲ್ಲಿ ಕುಳಿತಿದ್ದನು.
ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು 10 ಸ್ನೇಹಿತರ ಗುಂಪು ಸಾಮಾಜಿಕ ಮಾಧ್ಯಮ ರೀಲ್‌ಗಳನ್ನು ಚಿತ್ರೀಕರಿಸಲು ಕಾರನ್ನು ಬಾಡಿಗೆಗೆ ಪಡೆದಿತ್ತು ಎಂದು ʼಟೈಮ್ಸ್ ಆಫ್ ಇಂಡಿಯಾʼ ವರದಿ ಮಾಡಿದೆ. ವರದಿಗಳ ಪ್ರಕಾರ, ಯು-ಟರ್ನ್ ಮಾಡುವಾಗ ಚಾಲಕ ಬ್ರೇಕ್ ಬದಲಿಗೆ ಆಕ್ಸಿಲರೇಟರ್ ಒತ್ತಿದ್ದಾರೆ. ಚಾಲಕ ಅಪ್ರಾಪ್ತ ವಯಸ್ಕ ಎಂದು ವರದಿಯಾಗಿದೆ.
3 Young Men Drowned After Car Plunges into Canal During Social Media Reel Filming in Ahmedabadhttps://t.co/MSF9XGKd9d pic.twitter.com/6HfcA4BET2
— DeshGujarat (@DeshGujarat) March 6, 2025