
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಬಜೆಟ್ ಮಂಡನೆ ಮಾಡಿದ್ದು, 2025-26ನೇ ಸಾಲಿನ ಪ್ರಸಕ್ತ ಬಜೆಟ್ ಮಂಡನೆ ಮುಕ್ತಾಯಗೊಂಡಿದೆ.
ಬೆಳಿಗ್ಗೆ 10:15ಕ್ಕೆ ಬಜೆಟ್ ಮಂಡನೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ ಸುದೀರ್ಘವಾಗಿ ಮೂರುವರೆ ಗಂಟೆಗಳ ಕಾಲ ಬಜೆಟ್ ಮಂಡನೆ ನಡೆಸಿದರು. ಮಧ್ಯಾಹ್ನ 1:45ರವರೆಗೆ ಬಜೆಟ್ ಮಂಡಿಸುವ ಮೂಲಕ ತಮ್ಮ ದಾಖಲೆಯನ್ನೇ ತಾವು ಮುರಿದಿದ್ದಾರೆ.
ಕಳೆದ ಬಾರಿ ಸಿಎಂ ಸಿದ್ದರಾಮಯ್ಯ ಎರಡುವರೆ ಗಂಟೆ ಬಜೆಟ್ ಮಂಡಿಸಿದ್ದರು. ಆದರೆ ಈಬಾರಿ ಸಿಎಂ ಸಿದ್ದರಾಮಯ್ಯ ಮಂಡಿ ನೋವಿನ ನಡುವೆಯೂ ಸುದೀರ್ಘ ಮೂರುವರೆ ಗಂಟೆಗಳ ಕಾಲ ನೀರನ್ನೂ ಕುಡಿಯದೇ ನಿರರ್ಗಳವಾಗಿ ಬಜೆಟ್ ಮಂಡಿಸಿದ್ದಾರೆ. ಸುಮಾರು 4 ಲಕ್ಷ ಕೋಟಿ ಗಾತ್ರದ ರಾಜ್ಯ ಬಜೆಟ್ ಮಂಡಿಸಿದ್ದಾರೆ.