alex Certify SHOCKING : ಬಳ್ಳಾರಿಯಲ್ಲಿ ‘ಹಕ್ಕಿ ಜ್ವರ’ದಿಂದ 20,000 ಕ್ಕೂ ಹೆಚ್ಚು ಕೋಳಿಗಳು ಸಾವು : ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ಬಳ್ಳಾರಿಯಲ್ಲಿ ‘ಹಕ್ಕಿ ಜ್ವರ’ದಿಂದ 20,000 ಕ್ಕೂ ಹೆಚ್ಚು ಕೋಳಿಗಳು ಸಾವು : ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ.!

ಬಳ್ಳಾರಿಯಲ್ಲಿ ಹಕ್ಕಿ ಜ್ವರದಿಂದ 20,000 ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.

ಕಪ್ಪಗಲ್ಲುವಿನ ಸರ್ಕಾರಿ ಕೋಳಿ ಸಾಕಣೆ ಕೇಂದ್ರದಲ್ಲಿ 3 ದಿನಗಳ ಹಿಂದೆ 8000 ಕೋಳಿಗಳು ಮೃತಪಟ್ಟಿದ್ದವು. ಆದರೀಗ  ಮತ್ತಷ್ಟು  ಕೋಳಿಗಳು ಮೃತಪಟ್ಟಿದ್ದು, ಆತಂಕ ಮನೆ ಮಾಡಿದೆ. ಕುರೇಕೊಪ್ಪ ಮತ್ತು ಕಪ್ಪಗಲ್ಲು ಕೋಳಿ ಸಾಕಣೆ ಕೇಂದ್ರಗಳಲ್ಲಿ ಕೋಳಿಗಳು ಸಾವನ್ನಪ್ಪಿದೆ. ಕೋಳಿಗಳು ಏಕಾಏಕಿ ಸಾವನ್ನಪ್ಪುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಹಕ್ಕಿಜ್ವರ ಭೀತಿ ಎದುರಾಗಿದೆ.

ಈ ಮಾರ್ಗಸೂಚಿ ಪಾಲನೆ ಕಡ್ಡಾಯ

ಹಕ್ಕಿ ಜ್ವರ ಕಂಡುಬಂದ ಜಾಗದಿಂದ 3 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ.

* ಪೌಲ್ಟ್ರಿಯಲ್ಲಿ ಕೆಲಸ ಮಾಡುವವರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

* ಜ್ವರ ಕಾಣಿಸಿಕೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

* ಕೋಳಿ ಮಾಂಸ ಧರಿಸುವಾಗ ಮಾಸ್ಕ್, ಗ್ಲೌಸ್ ಧರಿಸುವುದು ಕಡ್ಡಾಯ

* ಹಕ್ಕಿಜ್ವರ ಬಂದವರಿಗೆ ಪ್ರತ್ಯೇಕ ವಾರ್ಡ್ ತೆರೆಯಬೇಕು

* ಕೋಳಿ, ಹಕ್ಕಿಗಳ ಜೊತೆ ಇರುವವರಿಗೆ ಔಷಧ ನೀಡಬೇಕು.

*ಹಕ್ಕಿ ಜ್ವರ ಕಂಡು ಬಂದರೆ 10 ಕಿಮೀ ವ್ಯಾಪ್ತಿಯನ್ನು ಸರ್ವೆಲೆನ್ಸ್ ಪ್ರದೇಶ ಎಂಬುದಾಗಿ ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...