
ಮುಂಬೈ: ದೇಶದಲ್ಲಿ ಭಾಷಾ ವಿವಾದ ನಡೆಯುತ್ತಿರುವ ಹೊತ್ತಲ್ಲೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಮರಾಠಿ ಭಾಷೆ ಕುರಿತಾಗಿ ಹೇಳಿಕೆ ನೀಡಿದ್ದಾರೆ.
ಮರಾಠಿ ಅಧಿಕೃತ ಭಾಷೆಯಾಗಿದ್ದು, ರಾಜ್ಯದಲ್ಲಿ ವಾಸಿಸುವ ಎಲ್ಲರೂ ಮರಾಠಿ ಕಲಿಯಬೇಕು ಎಂದು ಹೇಳಿದ್ದಾರೆ. ವಿಧಾನಸಭೆಯಲ್ಲಿ ಭಾಷೆಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಅವರು, ಮರಾಠಿ ರಾಜ್ಯದ ಸಂಸ್ಕೃತಿ, ಅನನ್ಯತೆ ಅಂತರ್ಗತ ಭಾಗವಾಗಿದೆ. ಮರಾಠಿ ಭಾಷೆ ಕಲಿಯುವುದು, ಅದಕ್ಕೆ ಗೌರವ ನೀಡುವುದು ಇಲ್ಲಿನ ಎಲ್ಲಾ ನಾಗರೀಕರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಆರ್.ಎಸ್.ಎಸ್. ಹಿರಿಯ ನಾಯಕ ಭಯ್ಯಾಜಿ ಜೋಶಿ, ಪ್ರತಿಯೊಬ್ಬರು ಮರಾಠಿ ತಿಳಿಯುವುದು ಅನಿವಾರ್ಯವಲ್ಲ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಸಿಎಂ ದೇವೇಂದ್ರ ಫಡ್ನವೀಸ್ ಅವರಿಂದ ಮಹಾರಾಷ್ಟ್ರದಲ್ಲಿ ವಾಸಿಸುವ ಎಲ್ಲರೂ ಮರಾಠಿ ಕಲಿಯಬೇಕು ಎಂಬ ಹೇಳಿಕೆ ಬಂದಿದೆ.