
ಸ್ವೀಟ್ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಕೇರಳ ಕೊಯಿಕ್ಕೋಡ್ ನ ಪೆಟ್ಟಮ್ಮಲ್ ನಲ್ಲಿ ನಡೆದಿದೆ.
ಸ್ವೀಟ್ ಡ್ರಗ್ ಹೆಸರಲ್ಲಿ ಅಂಗಡಿಯಲ್ಲಿ ಗಾಂಜಾ ಸ್ವೀಟ್ ಮಾರಾಟ ಮಾಡುತ್ತಿದ್ದ. ಅಂಗಡಿ ಮೇಲೆ ದಾಳಿ ನಡೆಸಿದ ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಗಾಂಜಾ ಮಿಶ್ರಿತ 31 ಸ್ವೀಟ್ ಗಳನ್ನು ಜಪ್ತಿ ಮಾಡಿದ್ದಾರೆ. ಅಂಗಡಿ ಮಾಲೀಕ ಆಕಾಶ್ ನನ್ನು ಬಂಧಿಸಿದ್ದಾರೆ. ಈತ ಉತ್ತರ ಪ್ರದೇಶ ಮೂಲದವನೆಂದು ತಿಳಿದುಬಂದಿದೆ.
ವಶಪಡಿಸಿಕೊಳ್ಳಲಾದ ಪ್ರತಿ ಗಾಂಜಾ ಸ್ವೀಡ್ 96 ಗ್ರಾಂ ಇದೆ. ಒಂದು ಸ್ವೀಟ್ ಗೆ 30-50 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಯಾವುದೇ ಅನುಮಾನ ಬರಬಾರದು ಎಂಬ ಕಾರಣಕ್ಕೆ ಶಾಲೆ ಹಾಗೂ ಕಾಲೇಜುಗಳ ಸಮೀಪವಿರುವ ಸಣ್ಣ ಅಂಗಡಿಗಳಿಗೆ ಪೂರೈಕೆ ಮಾಡಿ ಅಲ್ಲಿ ಗಾಂಜಾ ಸ್ವೀಟ್ ಮಾರಲಾಗುತ್ತಿತ್ತು. ಈ ಮೂಲಕ ವಿದ್ಯಾರ್ಥಿಗಳನ್ನು ಮಾದಕ ವಸ್ತುಗಳ ವ್ಯಸನ ಜಾಲಕ್ಕೆ ಬೀಳಿಸಿಕೊಳ್ಳುವುದೇ ಮಾಫಿಯಾದ ಹೊಸ ತಂತ್ರವಾಗಿದೆ.
ಸ್ವೀಟ್ ನಲ್ಲಿ ಗಾಂಜಾ ಮಿಶ್ರಣವಾಗಿರುವುದರಿಂದ ಈ ಸ್ವೀಟ್ ಹೆಚ್ಚಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿತ್ತು. ಉತ್ತರಾಖಂಡದಿಂದ ಈ ಸ್ವೀಟನ್ನು ಕೇರಳಕ್ಕೆ ತರಲಾಗಿದೆ. ಕೇರಳದ ಹಲವು ಅಂಗಡಿಗಳಿಗೆ ಇವುಗಳನ್ನು ವಿತರಿಸಿರುವ ಸಾಧ್ಯತೆ ಇದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.