ಅಮೆರಿಕದ ಮೈನೆ ರಾಜ್ಯದಲ್ಲಿ ನಡೆದ ಹೃದಯಸ್ಪರ್ಶಿ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇಲ್ಛಾವಣಿಯ ಮೇಲೆ ಸಿಲುಕಿದ್ದ ಹಸ್ಕಿ ನಾಯಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದು, ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗೆ ನಾಯಿ ಪ್ರೀತಿಯ ಮುತ್ತಿಟ್ಟಿದೆ.
2018 ರಲ್ಲಿ ನಡೆದ ಈ ಘಟನೆಯ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ. ಮೇಲ್ಛಾವಣಿಯ ಮೇಲೆ ಸಿಲುಕಿದ್ದ ನಾಯಿ ಸಹಾಯಕ್ಕಾಗಿ ಕಾಯುತ್ತಿತ್ತು. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ನಾಯಿಯನ್ನು ರಕ್ಷಿಸಿದ್ದಾರೆ. ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಯನ್ನು ನೋಡಿದ ನಾಯಿ ಬಾಲ ಅಲ್ಲಾಡಿಸುತ್ತಾ ಓಡಿ ಬಂದು ಆತನಿಗೆ ಮುತ್ತಿಟ್ಟಿದೆ. ಆತನನ್ನು ನೆಕ್ಕುವ ಮೂಲಕ ತನ್ನ ಪ್ರೀತಿ ಹಾಗೂ ಕೃತಜ್ಞತೆಯನ್ನು ಸಲ್ಲಿಸಿದೆ.
ಪ್ರಾಣಿಗಳು ಮತ್ತು ಸಾಕುಪ್ರಾಣಿಗಳ ಕಥೆಗಳು ಮತ್ತು ವಿಡಿಯೋಗಳಿಗೆ ಮೀಸಲಾದ ರೆಡ್ಡಿಟ್ ಪುಟವು ಈ ಮುದ್ದಾದ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಮತ್ತೆ ವೈರಲ್ ಆಗಿದ್ದು, ವೀಕ್ಷಕರ ಹೃದಯ ಗೆದ್ದಿದೆ. ಈ ಘಟನೆಯನ್ನು ವರದಿ ಮಾಡುವಾಗ ವೆಲ್ಸ್ ಮೈನೆ ಪೊಲೀಸರು ಮೂಲತಃ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.
ವಿಡಿಯೋದಲ್ಲಿ, ಅಗ್ನಿಶಾಮಕ ಸಿಬ್ಬಂದಿ ಹಸ್ಕಿಯನ್ನು ಸ್ವಾಗತಿಸಲು ಮತ್ತು ಅದನ್ನು ತಮ್ಮ ತೋಳುಗಳಲ್ಲಿ ಹಿಡಿದುಕೊಳ್ಳಲು ಬಾಗುತ್ತಿರುವುದು ಕಂಡುಬರುತ್ತದೆ. ನಾಯಿ ಸಂತೋಷದಿಂದ ಬಾಲ ಅಲ್ಲಾಡಿಸುತ್ತಾ ಓಡಿ ಬಂದಿದೆ. ಸಮವಸ್ತ್ರದಲ್ಲಿ ಮೊಣಕಾಲು ಊರಿ ಮೇಲ್ಛಾವಣಿಯಲ್ಲಿ ಸಿಲುಕಿದ್ದ ಪ್ರಾಣಿಯನ್ನು ರಕ್ಷಿಸುತ್ತಿದ್ದಾಗ, ಹಸ್ಕಿ ಆತನ ಕಡೆಗೆ ತಿರುಗಿ ಆತನ ಕೆನ್ನೆಗೆ ಮುತ್ತಿಟ್ಟಿದೆ. ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಪ್ರಾಣಿಯು ಮನುಷ್ಯನನ್ನು ಸಂತೋಷದಿಂದ ನೆಕ್ಕುತ್ತಿರುವ ದೃಶ್ಯವನ್ನು ಸಹ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ‘ಅನಿಮಲ್ಸ್ ಡೂಯಿಂಗ್ ಸ್ಟಫ್’ ರೆಡ್ಡಿಟ್ ಚಾನೆಲ್‌ನಲ್ಲಿ “ನಾಯಿ ಅಗ್ನಿಶಾಮಕನಿಗೆ ಧನ್ಯವಾದ ಹೇಳಿದೆ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ವೈರಲ್ ಆಗಿದ್ದು, ನೂರಾರು ಅಪ್‌ವೋಟ್‌ಗಳನ್ನು ಪಡೆದುಕೊಂಡಿದೆ.