alex Certify GOOD NEWS : ರಾಜ್ಯದ 595 ಮಂದಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ‘ವಿವಾಹ ಪ್ರೋತ್ಸಾಹ ಧನ’ ಜಮಾ : ಸಚಿವ ಸಂತೋಷ ಲಾಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS : ರಾಜ್ಯದ 595 ಮಂದಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ‘ವಿವಾಹ ಪ್ರೋತ್ಸಾಹ ಧನ’ ಜಮಾ : ಸಚಿವ ಸಂತೋಷ ಲಾಡ್

ಧಾರವಾಡ : ಕಟ್ಟಡ ಕಾರ್ಮಿಕರ ಮಕ್ಕಳ ವಿವಾಹಕ್ಕೆ ದೊರೆಯುವ ಪ್ರೋತ್ಸಾಹಧನ 2024-25ನೇ ಸಾಲಿನಲ್ಲಿ ಮಂಜೂರಾಗಿರುವ 23,121 ಫಲಾನುಭವಿಗಳ ಪೈಕಿ 6,595 ಫಲಾನುಭವಿಗಳಿಗೆ ಸಹಾಯ ಧನದ ಮೊತ್ತವನ್ನು ಅವರ ಖಾತೆಗೆ ಡಿಬಿಟಿ ಮೂಲಕ ನೇರ ಜಮಾ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಅವರು ತಿಳಿಸಿದರು.

ಅವರು ಇಂದು (ಮಾ.5) ಬೆಳಿಗ್ಗೆ ವಿಧಾನ ಸಭೆಯ ಕಲಾಪದಲ್ಲಿ ಭಾಗವಹಿಸಿ, ಹುಬ್ಬಳ್ಳಿ ಧಾರವಾಡ ಕೇಂದ್ರಿಯ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
2022 ರಿಂದ ಇಲ್ಲಿಯವರೆಗೆ ಮದುವೆ ಧನ ಸಹಾಯಕ್ಕಾಗಿ 2022-23 ನೇ ಸಾಲಿನಲ್ಲಿ 66,514 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 48,366 ಅರ್ಜಿಗಳು ಮಂಜೂರಾಗಿವೆ. 2023-24 ನೇ ಸಾಲಿನಲ್ಲಿ 50,398 ಅರ್ಜಿಗಳು ಸಲ್ಲಿಕೆಯಾಗಿದ್ದು, 34,604 ಅರ್ಜಿಗಳು ಮಂಜೂರಾಗಿವೆ. ಮತ್ತು 2024-25 ನೇ ಸಾಲಿನಲ್ಲಿ 40,262 ಅರ್ಜಿಗಳು ಸಲ್ಲಿಕೆಯಾಗಿದ್ದು, 23,121 ಅರ್ಜಿಗಳು ಮಂಜೂರಾಗಿವೆ. ಒಟ್ಟಾರೆಯಾಗಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು ರಾಜ್ಯಾಂದತ್ಯ 1,57,174 ಅರ್ಜಿಗಳು ಮದುವೆ ಧನ ಸಹಾಯ ಬಯಸಿ, ಸಲ್ಲಿಕೆಯಾಗಿದ್ದು ಇವುಗಳ ಪೈಕಿ 1,06,091 ಅರ್ಜಿಗಳು ಮಂಜೂರಾಗಿವೆ. ಮತ್ತು ಇದರಲ್ಲಿನ 6,317 ಅರ್ಜಿಗಳು ಪರಿಶೀಲನೆಗೆ ಹಾಗೂ ಮಂಜೂರಾತಿಗೆ ಬಾಕಿ ಇವೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

6,595 ಫಲಾನುಭವಿಗಳಿಗೆ ಸಹಾಯ ಧನದ ಮೊತ್ತವನ್ನು ಪಾವತಿಸುವ ಪೂರ್ವದಲ್ಲಿ ಕಾರ್ಮಿಕ ಅಧಿಕಾರಿಗಳು ಡಿಬಿಟಿ ತಂತ್ರಾಂಶದ ಮೂಲಕ ಫಲಾನುಭವಿಗಳ ಆಧಾರ್ ವ್ಯಾಲಿಡೆಷನ್ (Validation) ಹಾಗೂ ಇನ್ನಿತರ ಮಾನದಂಡಗಳ ಪ್ರಕ್ರಿಯೆ ಪೂರ್ಣಗೊಳಿಸಿ, ಅರ್ಹ ಫಲಾನುಭವಿಗಳಿಗೆ ಮಂಡಳಿಯಿಂದ ಸಹಾಯಧನವನ್ನು ಪಾವತಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2023 ರಿಂದ ಈ ಯೊಜನೆಯಡಿ ಒಟ್ಟು 1,081 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 652 ಫಲಾನುಭವಿಗಳಿಗೆ ಸಹಾಯ ಧನವನ್ನು ಮಂಜೂರು ಮಾಡಿ, ಡಿಬಿಟಿ ಮುಖಾಂತರ ಫಲಾನುಭವಿಗಳಿಗೆ ಸಹಾಯಧನನ್ನು ವರ್ಗಾಯಿಸಲಾಗಿದೆ ಹಾಗೂ 46 ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ ಎಂದು ಸಚಿವ ಸಂತೋಷ ಲಾಡ್ ಅವರು ಸದನದಲ್ಲಿ ತಿಳಿಸಿದರು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...