
ಮಂಗಳೂರು: ಲೈಸನ್ಸ್ ಇಲ್ಲದೇ ಅಪ್ರಾಪ್ತ ಬಾಲಕ ಸ್ಕೂಟರ್ ಚಲಾಯಿಸಿದ್ದಕ್ಕೆ ಆತನ ತಂದೆಗೆ ಕೋರ್ಟ್ ದಂಡ ವಿಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಬಂಟ್ವಾಳ ಸಂಚಾರ ಠಾಣೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಲಕನೊಬ್ಬ ಸ್ಕೂಟರ್ ಚಲಾಯಿಸಿಕೊಂಡು ಬಂದಿದ್ದ. ಆತನನ್ನು ತಡೆದು ವಿಚಾರಿಸಿದಾಗ ಆತನ ಬಳಿ ಲೈಸನ್ಸ್ ಇರಲಿಲ್ಲ. ಅಲ್ಲದೇ ಆತ ಅಪ್ರಾಪ್ತ ಎಂಬುದು ತಿಳಿದುಬದಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಬಾಲಕನ ತಂದೆ ಸಮೀರ್ ಎಂಬುವವರಿಗೆ ಬಂಟ್ವಾಳ ಜೆ ಎಂ ಎಫ್ ಸಿ ಕೋರ್ಟ್ 26 ಸವಿರ ರೂಪಾಯಿ ದಂಡ ವಿಧಿಸಿದ್ದಾರೆ. ಮಕ್ಕಳಿಗೆ ವಾಹನ ಕೊಡುವಂತಿಲ್ಲ. ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ನೀಡುವುದು ರಸ್ತೆ ಸುರಕ್ಷಾ ನಿಯಮದ ಉಲ್ಲಂಘನೆ ಹಾಗೂ ಕಾನೂನುಬಾಹಿರವಾಗಿದೆ ಎಂದು ಕೋರ್ಟ್ ತಿಳಿಸಿದೆ.