ಗದಗ : ಗದಗ ಜಿಲ್ಲೆಯ ನರಗುಂದದಲ್ಲಿ ಬಾಣಂತಿ ಮೃತಪಟ್ಟಿದ್ದು, ಕುಟುಂಬಸ್ಥರು ಗಂಡನ ಮನೆಯವರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.
ಮೃತಪಟ್ಟವರನ್ನು ಬಾಣಂತಿ ಪವಿತ್ರಾ (25) ಎಂದು ಗುರುತಿಸಲಾಗಿದೆ.ವರದಕ್ಷಿಣೆ ಕಿರುಕುಳ ನೀಡಿ ನೇಣು ಹಾಕಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಗಂಡನ ಮನೆಗೆ ಬಂದ ಬಾಣಂತಿ ಮೂರೇ ದಿನದಲ್ಲಿ ಮೃತಪಟ್ಟಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಪವಿತ್ರಾ ಶವ ಪತ್ತೆಯಾಗಿದೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 5 ತಿಂಗಳ ಬಾಣಂತಿ ಮೃತಪಟ್ಟಿದ್ದು, ಅತ್ತೆ ಸೋಮವ್ವಳ ವಿರುದ್ಧ ಬಾಣಂತಿಯ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.