
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ವಿವಾಹವಾಗಿ ಕೇವಲ ಮೂರೇ ದಿನಗಳಾಗಿದ್ದ ಶಶಾಂಕ್ (28) ಎಂಬ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಈ ದುರ್ಘಟನೆ ಕೆ.ಆರ್.ಪೇಟೆಯಲ್ಲಿ ನಡೆದಿದ್ದು, ಮೃತ ಶಶಾಂಕ್ ಅವರು ಕೆ.ಆರ್.ಪೇಟೆ ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್ ಹಾಗೂ ಎಸ್ಬಿಐ ಅಧಿಕಾರಿ ವನಿತಾ ಮಂಜುನಾಥ್ ದಂಪತಿಯ ಪುತ್ರ.
ಶಶಾಂಕ್ ಅವರು ಜಾರ್ಖಂಡ್ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಮೂರೇ ದಿನಕ್ಕೆ ಶಶಾಂಕ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.