
ಬೆಂಗಳೂರು: ಇಂಡಿ ತಾಲೂಕನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕೆಂದು ವಿಧಾನಸಭೆಯಲ್ಲಿ ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ್ ಗಮನಸೆಳೆದಿದ್ದಾರೆ.
ಇಂಡಿ ತಾಲೂಕನ್ನು ಜಿಲ್ಲೆಯನ್ನಾಗಿ ಪರಿವರ್ತಿಸಬೇಕು. ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಯಾಗಿ ಪರಿವರ್ತನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಸಾಕಷ್ಟು ಹೊಸ ಜಿಲ್ಲೆಗಳಿಗೆ ಬೇಡಿಕೆ ಇದೆ. ರಾಜಸ್ಥಾನ ಮಾದರಿಯಲ್ಲಿ ಹೊಸ ಜಿಲ್ಲೆಗಳನ್ನು ಘೋಷಿಸಿ ಮುಂದೆ ಹೊಸ ಜಿಲ್ಲೆಗಳನ್ನು ಮಾಡುವಾಗ ಇಂಡಿ ತಾಲೂಕನ್ನು ಗಮನಿಸಿ ಎಂದು ಹೇಳಿದ್ದಾರೆ.
ಕಂದಾಯ ಸಚಿವ ಕೃಷ್ಣಭೈರೇಗೌಡ ಉತ್ತರ ನೀಡಿದ್ದು, ಸದ್ಯಕ್ಕೆ ಯಾವುದೇ ಹೊಸ ಜಿಲ್ಲೆ ಮಾಡುವ ನಿರ್ಧಾರವಿಲ್ಲ. ಮುಂದೆ ಹೊಸ ಜಿಲ್ಲೆಗಳ ಪರಿವರ್ತನೆಯ ವೇಳೆ ಗಮನಹರಿಸಲಾಗುವುದು ಎಂದು ಹೇಳಿದ್ದಾರೆ.
ಹೊಸ ಜಿಲ್ಲೆ ಅಥವಾ ತಾಲೂಕುಗಳನ್ನು ರಚಿಸುವ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪ ಇಲ್ಲ. ಒಂದೆರಡು ತಾಲೂಕುಗಳಿಂದ ಜಿಲ್ಲಾ ಕೇಂದ್ರ ರಚಿಸುವಂತೆ ಬೇಡಿಕೆ ಇದೆ. ಮುಂದೆ ಜಿಲ್ಲಾ ಕೇಂದ್ರಗಳ ರಚನೆ ಸಾಧ್ಯತೆ ಎದುರಾದಲ್ಲಿ ಇಂಡಿ ತಾಲೂಕನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.