
ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ ! ಇ-ಕೆವೈಸಿ ಮಾಡಿಸಲು ಇದ್ದ ಗಡುವನ್ನು ಮಾರ್ಚ್ 15ರ ವರೆಗೆ ವಿಸ್ತರಿಸಲಾಗಿದೆ. ಜೊತೆಗೆ, ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಕ್ಯೂ ನಿಲ್ಲುವ ತಲೆಬಿಸಿ ಇಲ್ಲದೆ, ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಇ-ಕೆವೈಸಿ ಮಾಡುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ.
ಹೌದು, ಇ-ಕೆವೈಸಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸರ್ಕಾರ “ಮೇರಾ ಇ-ಕೆವೈಸಿ” ಎಂಬ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಈ ಆ್ಯಪ್ ಬಳಸಿ ನೀವು ನಿಮ್ಮ ಕುಟುಂಬದ ಸದಸ್ಯರ ಇ-ಕೆವೈಸಿ ಮಾಡಬಹುದು. ಜೊತೆಗೆ, ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಿಕೊಂಡು ಇ-ಕೆವೈಸಿ ಮಾಡಬಹುದು.
ಮನೆಯಲ್ಲೇ ಇ-ಕೆವೈಸಿ ಮಾಡುವುದು ಹೇಗೆ ?
- ಮೊದಲಿಗೆ “ಆಧಾರ್ ಫೇಸ್ ಆರ್ಡಿ ಸೇವಾ” ಆ್ಯಪ್ ಅನ್ನು ಡೌನ್ಲೋಡ್ ಮಾಡಿ.
- ನಂತರ “ಮೇರಾ ಇ-ಕೆವೈಸಿ” ಆ್ಯಪ್ ಡೌನ್ಲೋಡ್ ಮಾಡಿ.
- ಆ್ಯಪ್ ನಲ್ಲಿ ಕೇಳುವ ವಿವರಗಳನ್ನು ಭರ್ತಿ ಮಾಡಿ, ಮುಖ ಗುರುತಿಸುವಿಕೆ ಪ್ರಕ್ರಿಯೆ ಮುಗಿಸಿ.
- ಅಷ್ಟೇ, ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಇ-ಕೆವೈಸಿ ಏಕೆ ಬೇಕು ?
- ಸರ್ಕಾರ ಬಡ ಕುಟುಂಬಗಳಿಗೆ ಸಹಾಯಧನದಲ್ಲಿ ಪಡಿತರ ನೀಡುತ್ತದೆ.
- ಅನರ್ಹರು ಈ ಸೌಲಭ್ಯ ಪಡೆಯುವುದನ್ನು ತಪ್ಪಿಸಲು ಇ-ಕೆವೈಸಿ ಕಡ್ಡಾಯ.
ಅನರ್ಹರಿಗೆ ಎಚ್ಚರಿಕೆ
- ಅನರ್ಹರು ಪಡಿತರ ಪಡೆದರೆ, ಹಣ ಮರುಪಾವತಿ ಮಾಡಬೇಕು.
- ಸರ್ಕಾರಿ ನೌಕರರ ಸಂಬಳದಿಂದ ಹಣ ಕಡಿತಗೊಳಿಸಲಾಗುವುದು.
- ಅರ್ಹತೆ ಇಲ್ಲದಿದ್ದರೆ ಕಾನೂನು ನೋಟಿಸ್ ಬರುತ್ತದೆ.
ಸರ್ಕಾರ ನಿಜವಾದ ಬಡವರಿಗೆ ಮಾತ್ರ ಸಹಾಯಧನ ತಲುಪುವಂತೆ ಮಾಡಲು ಈ ಕ್ರಮ ಕೈಗೊಂಡಿದೆ. ಹಾಗಾಗಿ, ಪಡಿತರ ಚೀಟಿ ಹೊಂದಿರುವವರೆಲ್ಲರೂ ಮಾರ್ಚ್ 15ರ ಒಳಗೆ ಇ-ಕೆವೈಸಿ ಮಾಡಿಸಿ.