ಬೆಂಗಳೂರು : ‘ನಮ್ಮ ಮೆಟ್ರೋ’ ಟಿಕೆಟ್ ದರ ಹೆಚ್ಚಳದ ನಂತರ ಪ್ರಯಾಣಿಕರ ಸಂಖ್ಯೆ ಭಾರಿ ಕಡಿಮೆಯಾಗಿದೆ. ಒಂದೇ ತಿಂಗಳಿನಲ್ಲಿ ನಮ್ಮ ಮೆಟ್ರೋದಿಂದ 40 ಲಕ್ಷ ಮಂದಿ ಪ್ರಯಾಣಿಕರು ದೂರ ಉಳಿದಿದ್ದಾರೆ.
ಪ್ರತಿದಿನ ಮೆಟ್ರೋದಲ್ಲಿ 2.49 ಕೋಟಿ ಜನರು ಪ್ರಯಾಣಿಸಿದ್ದರೆ, ಫೆಬ್ರವರಿಯಲ್ಲಿ ಈ ಸಂಖ್ಯೆ 2.09 ಕೋಟಿಗೆ ಇಳಿದಿದೆ. ಪ್ರತಿದಿನ ಸರಾಸರಿ 8 ಲಕ್ಷ ಜನರು ಮೆಟ್ರೋದಲ್ಲಿ ಓಡಾಡುತ್ತಿದ್ದರು. ಈಗ ಈ ಸಂಖ್ಯೆ 7.46 ಲಕ್ಷಕ್ಕೆ ಕುಸಿದಿದೆ.
ಪ್ರತಿದಿನ 6 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ಸ್ವಂತಹ ವಾಹನ, ಇತರ ವಾಹನಗಳನ್ನು ಅವಲಂಬಿಸಿದ್ದಾರೆ.ಅಧಿಕೃತ ಮಾಹಿತಿ ಪ್ರಕಾರ ಫೆ.10 ರಿಂದ 14 ರವರೆಗೆ ಸರಾಸರಿ ಪ್ರಯಾಣಿಕರ ಸಂಖ್ಯೆ 7.72 ಲಕ್ಷಕ್ಕೆ ಕುಸಿದಿದೆ.
ನಮ್ಮ ಮೆಟ್ರೋ’ ಟಿಕೆಟ್ ದರ ಏರಿಕೆಯಾದ ಹಿನ್ನೆಲೆ ಬೆಂಗಳೂರಿನಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳವಾದ ಹಿನ್ನೆಲೆ ಪ್ರಯಾಣಿಕರು ನಮ್ಮ ಮೆಟ್ರೋಗೆ ಸೆಡ್ಡು ಹೊಡೆದು ಆಟೋ, ಕ್ಯಾಬ್ ನತ್ತ ಮುಖ ಮಾಡಿದ್ದಾರೆ.ಟಿಕೆಟ್ ದರ ಏರಿಕೆಯಿಂದಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಜನರ ಸಂಖ್ಯೆ ಕುಂಠಿತವಾಗುತ್ತಿದ್ದಂತೆ ಸಹಜವಾಗಿಯೇ ಕಲೆಕ್ಷನ್ ಸಹ ಕಡಿಮೆಯಾಗಿದೆ.