ಪಂಜಾಬ್ನ ಗಡಿಯಲ್ಲಿ ಪಾಕಿಸ್ತಾನದ ಒಳನುಸುಳುವಿಕೆ ಪ್ರಯತ್ನಗಳು ಮುಂದುವರೆದಿವೆ. ಸೋಮವಾರದಂದು ಅಮೃತಸರ ಜಿಲ್ಲೆಯ ಕೊಟ್ರಾಜ್ದಾ ಗ್ರಾಮದ ಬಳಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಒಬ್ಬ ಪಾಕಿಸ್ತಾನಿ ಒಳನುಸುಳುಕೋರನನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರು ಗುಂಡಿಕ್ಕಿ ಕೊಂದಿದ್ದಾರೆ. ಕಳೆದ ವಾರದಲ್ಲಿ ಪಂಜಾಬ್ನಲ್ಲಿ ನಡೆದ ಎರಡನೇ ಘಟನೆ ಇದಾಗಿದೆ.
ಬೆಳಗ್ಗೆ ಸಮಯದಲ್ಲಿ ಒಳನುಸುಳುಕೋರನು ಗಡಿಯನ್ನು ದಾಟಿ, ನೆಲದ ಏರುಪೇರು ಮತ್ತು ಗೋಧಿ ಬೆಳೆಯ ಲಾಭ ಪಡೆದುಕೊಂಡು ಗಡಿ ಬೇಲಿಯ ಕಡೆಗೆ ಬರುತ್ತಿದ್ದ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ. ಬಿಎಸ್ಎಫ್ ಸಿಬ್ಬಂದಿ ಒಳನುಸುಳುಕೋರನನ್ನು ತಡೆದಿದ್ದು, ಆದರೆ ಅವನು ನಿಲ್ಲದೆ ಗಡಿ ಬೇಲಿಯ ಕಡೆಗೆ ಓಡಲು ಪ್ರಾರಂಭಿಸಿದಾಗ ಅವನ ಆಕ್ರಮಣಕಾರಿ ಸೂಚನೆಯನ್ನು ಗಮನಿಸಿದ ಸಿಬ್ಬಂದಿ, ಗುಂಡು ಹಾರಿಸಿ ಸ್ಥಳದಲ್ಲೇ ಅವನನ್ನು ಹತ್ಯೆ ಮಾಡಿದ್ದಾರೆ.
ಇದಕ್ಕೂ ಮುನ್ನ ಫೆಬ್ರವರಿ 26 ರಂದು ಪಂಜಾಬ್ನ ಪಠಾಣ್ಕೋಟ್ನಲ್ಲಿ ಗಡಿಯುದ್ದಕ್ಕೂ ಇದೇ ರೀತಿಯ ಘಟನೆಯಲ್ಲಿ ಬಿಎಸ್ಎಫ್ ಪಾಕಿಸ್ತಾನಿ ಒಳನುಸುಳುಕೋರನನ್ನು ಹತ್ಯೆ ಮಾಡಿತ್ತು.
ಬಿಎಸ್ಎಫ್ 2,289 ಕಿಮೀ ಭಾರತ-ಪಾಕಿಸ್ತಾನ ಗಡಿಯನ್ನು ಕಾಯುವ ಜವಾಬ್ದಾರಿಯನ್ನು ಹೊಂದಿದೆ, ಇದು ಉತ್ತರದಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಪಶ್ಚಿಮದಲ್ಲಿ ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ವರೆಗೆ ವ್ಯಾಪಿಸಿದೆ.