
ತಂದೆಯ ಹುಟ್ಟುಹಬ್ಬದ ಆಚರಣೆಗೆ ಹೋಗಬೇಕಿದ್ದ ದೆಹಲಿ ಪ್ರಯಾಣಿಕನೊಬ್ಬನ ಪ್ರಯಾಣ ಅಡೆತಡೆಯಿಂದ ಕೂಡಿದ್ದು, ಅಪರಿಚಿತರ ಸಹಾಯದಿಂದ ಸಕಾಲಕ್ಕೆ ತಲುಪಿದ್ದಾನೆ. ಶುಭ್ ಎಂಬ ಪ್ರಯಾಣಿಕ ದೆಹಲಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ರೈಲು ಹತ್ತಬೇಕಿತ್ತು. 150 ರೂಪಾಯಿ ಬಾಡಿಗೆ ಹೇಳಿದ ಆಟೋ ಚಾಲಕನೊಂದಿಗೆ 130 ರೂಪಾಯಿಗೆ ಮಾತುಕತೆ ನಡೆಸಿ ಪ್ರಯಾಣ ಬೆಳೆಸಿದ. ಆದರೆ, ಆಟೋ ಚಾಲಕ ರೈಲ್ವೆ ನಿಲ್ದಾಣದ ಬಗ್ಗೆ ಮಾತನಾಡುತ್ತಿದ್ದರೂ, ದೆಹಲಿ ಕಂಟೋನ್ಮೆಂಟ್ ಬದಲಿಗೆ ಹೊಸ ದೆಹಲಿ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ದಿದ್ದಾನೆ.
ಹೊಸ ದೆಹಲಿ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಾಗ ಬೆಳಿಗ್ಗೆ 6.10 ಆಗಿತ್ತು. ಆ ಸಮಯದಲ್ಲಿ ರೈಲು ಹೊಸ ದೆಹಲಿಯಿಂದ ಹೊರಡುತ್ತಿತ್ತು. ದೆಹಲಿ ಕಂಟೋನ್ಮೆಂಟ್ಗೆ 30 ನಿಮಿಷಗಳಲ್ಲಿ ತಲುಪಲು ಸಾಧ್ಯವಿರಲಿಲ್ಲ. ಆತಂಕಗೊಂಡ ಶುಭ್, ಆಟೋ ಚಾಲಕನಿಗೆ ತನ್ನ ಪರಿಸ್ಥಿತಿ ವಿವರಿಸಿದರು. ಆದರೆ, ಆಟೋ ಚಾಲಕ 15 ಕಿ.ಮೀ ದೂರವಿರುವುದರಿಂದ ಮತ್ತು ವಾಹನದಲ್ಲಿ ಇಂಧನ ಇಲ್ಲದ ಕಾರಣ ತಲುಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ.
ಆಗ ಆಟೋ ಚಾಲಕ ಮತ್ತೊಂದು ಆಟೋವನ್ನು ತಡೆದು ಶುಭ್ ಪರಿಸ್ಥಿತಿ ವಿವರಿಸಿದ್ದು, ಆಟೋದಲ್ಲಿ ಈಗಾಗಲೇ 60 ವರ್ಷದ ಮಹಿಳೆಯೊಬ್ಬರು ಆ್ಯಪ್ ಮೂಲಕ ಬುಕ್ ಮಾಡಿ ಕುಳಿತಿದ್ದರು. ಶುಭ್ ತನ್ನ ಪರಿಸ್ಥಿತಿ ವಿವರಿಸಿದಾಗ, ಮಹಿಳೆ ಸಹಾಯ ಮಾಡಲು ಒಪ್ಪಿದರು. ಪ್ರಯಾಣದ ಸಮಯದಲ್ಲಿ ಮಹಿಳೆ “ಚಿಂತೆ ಮಾಡಬೇಡಿ, ಸಮಯಕ್ಕೆ ಸರಿಯಾಗಿ ತಲುಪುತ್ತೀರಿ” ಎಂದು ಧೈರ್ಯ ತುಂಬಿದರು. 6.39ಕ್ಕೆ ಆಟೋ ನಿಲ್ದಾಣದ ಹೊರಗೆ ನಿಂತಿತು. 200 ರೂಪಾಯಿ ಬಾಡಿಗೆಯಾದರೂ, ಶುಭ್ ಬಳಿ ಚಿಲ್ಲರೆ ಇಲ್ಲದ ಕಾರಣ ಆಟೋ ಚಾಲಕ 500 ರೂಪಾಯಿ ತೆಗೆದುಕೊಳ್ಳಲು ನಿರಾಕರಿಸಿದರು.
ಶುಭ್ ರೈಲಿನ ಹೆಜ್ಜೆಯ ಮೇಲೆ ಕಾಲಿಡುವಷ್ಟರಲ್ಲಿ ರೈಲು ಚಲಿಸಲು ಪ್ರಾರಂಭಿಸಿತು. ಅಪರಿಚಿತರ ಸಹಾಯದಿಂದ ಸಮಯಕ್ಕೆ ಸರಿಯಾಗಿ ರೈಲು ಹತ್ತಿದ ಶುಭ್, ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. “ನೀವು ಪ್ರಪಂಚಕ್ಕೆ ದಯೆ ತೋರಿದಾಗ, ಪ್ರಪಂಚವು ನಿಮಗೆ ದಯೆ ತೋರಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ” ಎಂದು ಶುಭ್ ಹೇಳಿದ್ದಾರೆ.
“Kahan jaana hai bhaiya?” the auto driver asked.
“Delhi Cant,” I replied.
Without hesitation, he said, “Chalo.”
I asked about the fare. He quoted ₹150, but I bargained it down to ₹130, and we set off.
I’ve taken countless autos in Delhi, but this one led to chaos I never…
— Shubh (@kadaipaneeeer) March 2, 2025